ರಾಕಿಂಗ್ ಸ್ಟಾರ್ ಯಶ್ ಫ್ಯಾನ್ ಇಂಡಿಯಾ ಸ್ಟಾರ್ ಆಗಲು ಕಾರಣ ಕೆಜಿಎಫ್. ಕೆಜಿಎಫ್ ನ ನಂತರ ಯಶ್ ಅವರ ಜೀವನವೇ ಬದಲಾಯಿತು. ಈಗ ರಾಕಿಂಗ್ ಸ್ಟಾರ್ ದಕ್ಷಿಣ ಭಾರತ ಮಾತ್ರ ವಲ್ಲದೆ ಇಡೀ ಭಾರತದಲ್ಲೇ ಅತಿ ಹೆಚ್ಚು ಬೇಡಿಕೆ ಇರುವ ನಟ. ಯಶ್ ಅವರು ಇತ್ತೀಚಿಗೆ ಯಾವುದೇ ಸಂದರ್ಶನದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಇದೀಗ 'ದಿ ಹಾಲಿವುಡ್ ರಿಪೋರ್ಟರ್' ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಜಿಎಫ್ 2 ನಂತರ ಇದೀಗ ಯಶ್ ಅವರ 19ನೇ ಸಿನಿಮಾವಾದ ಟಾಕ್ಸಿಕ್ ನಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಇದೀಗ ಯಶ್ ಅವರು ಕೆಜಿಎಫ್ ಸೀರಿಸ್ ನ ಬಗ್ಗೆ ಹೇಳಿದ ಆ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಯಶ್ ಹೇಳಿದ್ದಾದರೂ ಏನು?
'ದಿ ಹಾಲಿವುಡ್ ರಿಪೋರ್ಟರ್' ನ ಸಂದರ್ಶನದಲ್ಲಿ ಅನುಪಮ ಚೋಪ್ರಾ ಅವರು ಕ್ರಿಕೆಟಿಗ ಶುಭಮನ್ ಗಿಲ್ ಕೆಜಿಎಫ್ 3 ಯಾವಾಗ ಎಂದು ಕೇಳಿದ್ದಾರೆ ಇದಕ್ಕೆ ನೀವು ಏನು ಹೇಳುತ್ತೀರಾ ಎಂದು ಯಶ್ ಅವರ ಬಳಿ ಕೇಳಿದ್ದಾರೆ. ಕೆಜಿಎಫ್-3ರ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಅವರೊಡನೆ ಮಾತನಾಡುತ್ತಿದ್ದೇನೆ. ಕೆಜಿಎಫ್ ನನ್ನ ಲೀಸ್ಟ್ ನಲ್ಲಿದೆ. ಕೆಜಿಎಫ್ 3 ಖಂಡಿತ ಬರುತ್ತೆ ಎಂದಿದ್ದಾರೆ. ಆದರೆ ಈಗ ಇವರು ಟಾಕ್ಸಿಕ್ ಮತ್ತು ರಾಮಾಯಣದಲ್ಲಿ ಬ್ಯುಸಿ ಇದ್ದಾರೆ. ಈ ಎರಡು ಸಿನಿಮಾದ ನಂತರ ಕೆಜಿಎಫ್ ಚಾಪ್ಟರ್ 3 ಖಂಡಿತವಾಗಿಯೂ ಬರಲಿದೆ. ಈಗಲೇ ಓದಿ: Bagheera: ಮೊದಲ ಹಾಡು ರುಧಿರ ಹಾರಾ ಬಿಡುಗಡೆ: ದೀಪಾವಳಿಗೆ ಅಬ್ಬರಿಸಲ ಸಜ್ಜಾದ ಬಘೀರ
ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಈ ಹಿಂದೆ ಒಂದು ಸಂದರ್ಶನದಲ್ಲಿ ಕೆಜಿಎಫ್ 3 ರ ಬಗ್ಗೆ ಮಾತಡಿದ್ದರು. ಅವರು ಕೂಡ ಕೆಜಿಎಫ್ ಚಾಪ್ಟರ್ 3 ಖಂಡಿತವಾಗಿಯೂ ಬರಲಿದೆ ಎಂದಿದ್ದಾರೆ. ಯಶ್ ಅವರ ಟಾಕ್ಸಿಕ್ ಮತ್ತು ರಾಮಾಯಣ ಹಾಗೂ ನೀಲ್ ಅವರ ಸಲಾರ್ 2 ಮತ್ತು ಜೂನಿಯರ್ ಎನ್ ಟಿಆರ್ ಸಿನಿಮಾದ ನಂತರ ಕೆಜಿಎಫ್ ಚಾಪ್ಟರ್ 3 ಬರಬಹುದು ಎಂದು ಅಂದಾಜಿಸಲಾಗಿದೆ.