Vettaiyan Box Office: ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ ತಲೈವಾರ್ ಅವರ ವೆಟ್ಟೆಯ್ಯಾನ್

ರಜನಿಕಾಂತ್ ಅವರು ಬಹು ನಿರೀಕ್ಷಿತ ಸಿನಿಮಾ ವೆಟ್ಟೆಯ್ಯಾನ್ ಅಕ್ಟೋಬರ್ 10 ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದೆ. ಟಿ.ಜಿ ಜ್ಞಾನವೆಲ್ ನಿರ್ದೇಶನದ ಈ ಸಿನಿಮಾಕ್ಕೆ ಲೈಕಾ ಪ್ರೊಡಕ್ಷನ್ ನ ಸುಬಾಸ್ಕರನ್ ಅಲ್ಲಿರಾಜ ಅವರು ಬಂಡವಾಳ ಹೂಡಿದ್ದಾರೆ. 


ಚಿತ್ರದ ತಾರಾಬಳಗ:

ರಜನಿಕಾಂತ್ ಅವರು ಅಥಿಯಾನ್ ಎಂಬ ಹಿರಿಯ ಪೋಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಡನೆ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಬಾಕ್ಸ್ ಆಫೀಸ್ ಕಲೆಕ್ಷನ್:

ಮೊದಲ ದಿನ ಪ್ರಪಂಚದಾದ್ಯಂತ ₹77.90 ಕೋಟಿ ರೂಪಾಯಿಗಳನ್ನು ಗಳಿಸಿದೆ. ಎರಡನೇ ದಿನ ₹45.26ಕೋಟಿ, ಮೂರನೇ ದಿನ ₹47.87 ಕೋಟಿ, ನಾಲ್ಕನೇ ದಿನ ₹41.32 ಕೋಟಿ ಮತ್ತು ಐದನೇ ದಿನ ₹27.80 ಕೋಟಿ ರೂಪಾಯಿಗಳನ್ನು ಗಳಿಸಿದೆ. ಮೊದಲ ವಾರದಲ್ಲೇ ಸುಮಾರು ₹240.15 ಕೋಟಿ ರೂಪಾಯಿಗಳನ್ನು ಗಳಿಸಿದೆ. ಈ ಮೂಲಕ ವೆಟ್ಟೆಯ್ಯಾನ್ ಬಾಕ್ಸ್ ಆಫೀಸಲ್ಲಿ ಭಾರಿ ಸದ್ದು ಮಾಡುತ್ತಿದೆ. 

ಕರ್ಕನಾಟಕ ಟಾಕೀಸ್(ka_takies) ಎಕ್ಸ್(X) ಖಾತೆಯ ಪ್ರಕಾರ ಕರ್ನಾಟಕದಲ್ಲಿ ಮೊದಲ ದಿನ ₹6.85 ಕೋಟಿ, ಎರಡನೇ ₹3.3 ಕೋಟಿ, ಮೂರು ಮತ್ತು ನಾಲ್ಕನೇ ದಿನ ಕ್ರಮವಾಗಿ ₹5.25 ಮತ್ತು ₹3.85 ಕೋಟಿ ರೂಪಾಯಿಗಳನ್ನು ಗಳಿಸಿದೆ. 

ಸಿನಿಮಾ ಸುಮಾರು 300 ಕೋಟಿ ರೂಪಾಯಿಗಳಿಲ್ಲಿ ನಿರ್ಮಾಣವಾಗಿದೆ. ಬಾಕ್ಸ್ ಆಫೀಸ್, ಓಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳು ಸೇರಿ ಸುಮಾರು 450 ರಿಂದ 500 ಕೋಟಿ ರೂಪಾಯಿಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಈಗಲೇ ಓದಿ: Martin Box Office: ಕರ್ನಾಟಕದಲ್ಲಿ ಮಾರ್ಟಿನ್ ನ ಮೊದಲೆರಡು ದಿನದ ಕಲೆಕ್ಷನನ್ನು ರಿವಿಲ್ ಮಾಡಿದ ಚಿತ್ರತಂಡ! ಎಷ್ಟು ಕೋಟಿ ರೂಪಾಯಿಗಳು?? ಈಗಲೇ ಓದಿ: Martin Box Office: ಕರ್ನಾಟಕದಲ್ಲಿ ಮಾರ್ಟಿನ್ ನ ಮೊದಲೆರಡು ದಿನದ ಕಲೆಕ್ಷನನ್ನು ರಿವಿಲ್ ಮಾಡಿದ ಚಿತ್ರತಂಡ! ಎಷ್ಟು ಕೋಟಿ ರೂಪಾಯಿಗಳು?? 

ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ, ಎಸ್ ಆರ್ ಕಥಿರ್ ಅವರ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಅವರ ಸಂಕಲನವಿದೆ. ಬಿಡುಗಡೆಯ ಮುನ್ನವೆ ಸಿನಿಮಾದ ಮನಸಿಲಾಯೋ ಹಾಡು ಎಲ್ಲೆಡೆ ವೈರಲ್ ಆಗಿ ಜನರ ಮನಸ್ಸನ್ನು ಗೆದ್ದಿತ್ತು ಮತ್ತು ಸಿನಿಮಾದ ಮೇಲೆ ಮತ್ತಷ್ಟು ಭರವಸೆಯನ್ನು ಉಂಟುಮಾಡುವಂತೆ ಮಾಡಿತು. ಈ ಹಾಡು ಬಿಟ್ಟರೆ ಸಿನಿಮಾದ ಬೇರೆ ಯಾವುದೇ ಹಾಡು ಅಷ್ಟಾಗಿ ಸದ್ದು ಮಾಡಲಿಲ್ಲ.  

Previous Post Next Post