ಚಿಯಾನ್ ವಿಕ್ರಂ ಅವರ ಫ್ಯಾನ್ ಇಂಡಿಯಾ ಸಿನಿಮಾವಾದ ತಂಗಲಾನ್ ಬಿಡುಗಡೆಯಾಗಿ ಎರಡು ತಿಂಗಳು ಕಳೆದರು ಇನ್ನೂ ಒಟಿಟಿ ಅಂಗಳಕ್ಕೆ ಲಗ್ಗೆ ಇಟ್ಟಿಲಿಲ್ಲ. ಪ. ರಂಜಿತ್ ಅವರ ನಿರ್ದೇಶನದ ಈ ಸಿನಿಮಾ ಮಿಶ್ರ ವಿಮರ್ಶೆಯನ್ನು ಪಡೆದಿತ್ತು.
ಸಿನಿಮಾ ಆಗಸ್ಟ್ 15 ರಿಂದು ಎಲ್ಲೆಡೆ ತೆರೆ ಕಂಡಿತ್ತು. ಇದೀಗ ಬಿಡುಗಡೆಯಾಗಿ ಎರಡು ತಿಂಗಳುಗಳು ಕಳೆದರೂ ಯಾವಾಗ ಯಾವ ಓಟಿಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿದೆ ಎಂಬ ಖಚಿತವಾದ ಮಾಹಿತಿ ಇನ್ನೂ ಸಿಕ್ಕಿಲ್ಲ. ಮೂಲಗಳ ಪ್ರಕಾರ ಈ ಸಿನಿಮಾ ಸುಮಾರು 100 ಕೋಟಿ ರೂಪಾಯಿಗಳನ್ನು ಗಳಿಸಿದೆ. ಕೆಲವು ವದಂತಿಗಳ ಪ್ರಕಾರ ಹಣಕಾಸಿನ ಸಮಸ್ಯೆಗಳಿಂದ ಒಟಿಟಿ ಬಿಡುಗಡೆ ತಡವಾಗುತ್ತಿದೆ.
ಇತ್ತೀಚಿಗೆ ನಿರ್ಮಾಪಕರು ಎಕ್ಸ್ ಸ್ಪೆಸ್ (X Space)ನಲ್ಲಿ ಒಟಿಟಿ ಬಿಡುಗಡೆ ಯಾವಾಗ ಎಂದು ಕೇಳಿದ್ದಕ್ಕೆ ಉತ್ತರ ನೀಡಿದ್ದಾರೆ. ತಂಗಲಾನ್ ನ ಒಟಿಟಿ ಹಕ್ಕನ್ನು ನೆಟ್ ಫ್ಲಿಕ್ಸ್ ಖರಿದಿಸಿದ್ದು, ಅವರು (ನೆಟ್ ಫ್ಲಿಕ್ಸ್) ದೀಪಾವಳಿಗೆ ಬಿಡುಗಡೆಯನ್ನು ನಿಗದಿಪಡಿಸಿದ್ದಾರೆ ಎಂದು ನಿರ್ಮಾಪಕ ಜ್ಞಾನವೆಲ್ ರಾಜ್ ಹೇಳಿಕೆ ನೀಡಿದ್ದಾರೆ. ಈಗಲೇ ಓದಿ: Martin Box Office: ಕರ್ನಾಟಕದಲ್ಲಿ ಮಾರ್ಟಿನ್ ನ ಮೊದಲೆರಡು ದಿನದ ಕಲೆಕ್ಷನನ್ನು ರಿವಿಲ್ ಮಾಡಿದ ಚಿತ್ರತಂಡ! ಎಷ್ಟು ಕೋಟಿ ರೂಪಾಯಿಗಳು??
ಸಿನಿಮಾದಲ್ಲಿ ವಿಕ್ರಮ್ ಮತ್ತು ಮಾಲವಿಕಾ ಮೋಹನನ್ ಜೊತೆ ಪಾರ್ವತಿ ತಿರುವೋತ್ತು, ಪಶುಪತಿ, ಸಂಪತ್ ರಾಮ್ ಮತ್ತು ಹರಿ ಕೃಷ್ಣ ಅವರು ಕಾಣಿಸಿಕೊಂಡಿದ್ದಾರೆ. ನೀಲಂ ಪ್ರೊಡಕ್ಷನ್, ಸ್ಟೂಡಿಯೋ ಗ್ರೀನ್ ಮತ್ತು ಜಿಯೋ ಸ್ಟೂಡಿಯೋ ಜಂಟಿಯಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ ತಮಿಳ್ ಸೇರಿದಂತೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂನಲ್ಲಿ ಅಕ್ಟೋಬರ್ 31ರಂದು ನೆಟ್ ಫ್ಲಿಕ್ಸ್ ನಲ್ಲಿ ಬರುವ ನಿರೀಕ್ಷೆಯಿದೆ.