Devara OTT: ದೇವರ ಓಟಿಟಿ ಬಿಡುಗಡೆ ಯಾವಾಗ? ಎಲ್ಲಿ?

ಜೂನಿಯರ್ ಎನ್ ಟಿಆರ್ ಅವರ ‌ಬಹು ನೀರಿಕ್ಷಿತ ಸಿನಿಮಾ 'ದೇವರ' ಸೆಪ್ಟೆಂಬರ್ 27ಕ್ಕೆ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ. ಆದರೆ ಇದೀಗ ಸಿನಿಮಾ ಒಟಿಟಿಯಲ್ಲಿ ಯಾವಾಗ ಬಿಡುಗಡೆಯಾಗುತ್ತೇ ಎಂದು ಸಿನಿ ಪ್ರಿಯರು ಕಾಯುತ್ತಿದ್ದರೆ. ಎನ್ ಟಿಆರ್ ಜೊತೆ ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದರು. 

ಇತ್ತೀಚಿಗೆ ದಿನಗಳಲ್ಲಿ ಫ್ಯಾನ್ ಇಂಡಿಯಾ ಸಿನಿಮಾಗಳು ಬಿಡುಗಡೆಯಾದ ಕೇವಲ ಒಂದೇ ತಿಂಗಳಲ್ಲಿ ಓಟಿಟಿ ಫ್ಲ್ಯಾಟ್ ಫಾರ್ಮ್ ಗೆ ಕಾಲಿಡುತ್ತಿದೆ. ಅದೇ ರೀತಿ ದೇವರ ಕೂಡ ಒಟಿಟಿಗೆ ಬರಲು ಸಿದ್ಧವಾಗುತ್ತಿದೆ. ಒಂದು ಮಾಹಿತಿಯ ಪ್ರಕಾರ ನವೆಂಬರ್ 8 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಇದನ್ನು ಚಿತ್ರ ತಂಡ ಅಥವಾ ನೆಟ್ ಫ್ಲಿಕ್ಸ್ ಇನ್ನೂ ಖಾತ್ರಿ ಪಡಿಸಿಲ್ಲ. 

ಈಗಲೇ ಓದಿ: Vettaiyan Box Office: ವೆಟ್ಟೆಯ್ಯಾನ್ ಮೊದಲ ಎರಡು ವಾರಗಳಲ್ಲಿ ಕರ್ನಾಟಕದಲ್ಲಿ ಗಳಿಸಿದ ಹಣವೆಷ್ಟು??

ಕೊರಟಲ ಶಿವ ಅವರ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತೆ ಎಂದು ಊಹಿಸಲಾಗಿತ್ತು. ಆದರೆ ಜನರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡು ಅಭಿಮಾನಿಗಳ ಆಸೆಯನ್ನ ನಿರಾಸೆ ಮಾಡಿತು. ಸಿನಿಮಾದ ಹಾಡುಗಳು ಭರವಸೆಯನ್ನ ಮೂಡಿಸಿದ್ದವು, ಏಕೆಂದರೆ ಚುಟ್ಟಮಲೆ ಹಾಡು ಯುಟ್ಯೂಬ್ ನಲ್ಲಿ ಕೇವಲ ದಿನಗಲಲ್ಲೆ 100 ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿತ್ತು. ಆದರೆ ಸಿನಿಮಾ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ.

ಈಗಲೇ ಓದಿ: Thangalaan OTT: ಚಿಯಾನ್ ವಿಕ್ರಮ್ ಅವರ ತಂಗಲಾನ್ ಓಟಿಟಿ ಬಿಡುಗಡೆ ಯಾವಾಗ? ಎಲ್ಲಿ?

ಚಿತ್ರ ಅನಿರುದ್ಧ್ ರವಿಚಂದರ್ ಅವರು ಸಂಗೀತ ಹೊಂದಿದ್ದು, ಆರ್ ರತ್ನವೆಲ್ ಅವರ ಛಾಯಾಗ್ರಹಣವಿತ್ತು. ಸಿನಿಮಾಕ್ಕೆ ಸುಧಾಕರ ಮಿಕ್ಕಿಲಿನೇವಿ ಮತ್ತು ಕೊಸರಾಜು ಹರಿಕೃಷ್ಣ ಅವರು ಬಂಡವಾಳ ಹೂಡಿದ್ದಾರೆ. ದೇವರ ಭಾಗ 1 ಸುಮಾರು ₹300 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದ್ದು, sacnilk.com ಪ್ರಕಾರ ಸಿನಿಮಾದ ಒಟ್ಟು ಕಲೆಕ್ಷನ್ ₹413.70 ಕೋಟಿ ರೂಪಾಯಿಗಳು ಆಗಿದೆ.

Previous Post Next Post