ಯುವ ಸಿನಿಮಾದ ಮೂಲಕ ಬೆಳ್ಳಿತರೆಗೆ ಕಾಲಿಟ್ಟ ಯುವ ರಾಜ್ಇ ಕುಮಾರ್ ಇದೀಗ ತಮ್ಮ ಎರಡನೇ ಸಿನಿಮಾಕ್ಕೆ ತಯಾರು ಆಗುತ್ತಿದ್ದಾರೆ. ಮೊದಲ ಸಿನಿಮಾದ ಮೂಲಕ ಜನರ ಮನಸ್ಸನ್ನು ಗೆಲ್ಲುವ ಮೂಲಕ ಯುವ ಅವರ ಮುಂಬರುವ ಸಿನಿಮಾದಲ್ಲಿ ಭರವಸೆಯನ್ನು ಉಂಟುಮಾಡುವಂತೆ ಮಾಡಿದ್ದಾರೆ.
ಯುವ ಅವರ ಎರಡನೇ ಸಿನಿಮಾದ ಮೊದಲ ಪೋಸ್ಟರ್ ಅನ್ನು ಇಂದು (ಅಕ್ಟೋಬರ್ 11) ಬಿಡುಗಡೆ ಮಾಡಿದ್ದಾರೆ. ಚಂದನವನದ ಮೂರು ಬಲಿಷ್ಠ ನಿರ್ಮಾಣ ಸಂಸ್ಥೆಗಳಿಂದ ನಿರ್ಮಾಣವಾಗಲಿದೆ ಯುವ ಅವರ ಎರಡನೇ ಸಿನಿಮಾ. ಅಶ್ವಿನಿ ಪುನೀತ್ ರಾಜಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್, ಕಾರ್ತಿಕ್ ಮತ್ತು ಯೋಗಿ ರಾಜ್ ಅವರ ಕೆ ಆರ್ ಜಿ ಸ್ಟುಡಿಯೋ ಮತ್ತು ಜಯಣ್ಣ ಮತ್ತು ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್ ಈ ಸಿನಿಮಾಕ್ಕೆ ಬಂಡವಾಳವನ್ನು ಹೂಡಲಿದ್ದಾರೆ. ಸಿನಿಮಾಕ್ಕೆ ರೋಹಿತ್ ಪದಕಿ ಅವರು ಆಕ್ಷನ್ ಕಟ್ ಹೇಳಲಿದ್ದಾರೆ.
ಪೋಸ್ಟರ್ ಅನ್ನು ನೋಡುವಾಗಲೇ ಇದೊಂದು ಆಕ್ಷನ್ ಫಿಲಂ ಎಂದು ಗೊತ್ತಾಗುತ್ತದೆ. ಪೋಸ್ಟರ್ ನಲ್ಲಿ ಕೈನಿಂದ ಲಾಂಗ್ ಅನ್ನು ಹಿಡಿದಿರುವ ದೃಶ್ಯವಿದೆ. ಆ ಕೈ ಪೂರ್ತಿಯಾಗಿ ರಕ್ತದಿಂದ ಕೂಡಿದೆ. ಕೈಯಲ್ಲಿ 'ರತ್ನ' ಎನ್ನುವ ಹಚ್ಚೆ ಕಾಣಿಸುತ್ತದೆ. ಪೋಸ್ಟರ್ ನ ಹಿನ್ನೆಲೆಯಲ್ಲಿ ನಮಗೆ ಬೆಂಗಳೂರಿನ ಗಲ್ಲಿ ಕಾಣಿಸುತ್ತದೆ. ಇದೊಂದು ಕ್ರೈಂ ರೌಡಿಸಂ ಗೆ ಸಂಬಂಧಪಟ್ಟ ಕಥೆಯಾಗಿರಬಹುದು ಎಂದು ಅನಿಸುತ್ತದೆ. ಪಾಪಗಳು ಯಾವತ್ತೂ ಕೆಂಪಾಗಿರುವುದಿಲ್ಲ ಎಂಬ ಟ್ಯಾಗ್ ಲೈನ್ ಅನ್ನು ಪೋಸ್ಟರ್ ನಲ್ಲಿ ಬರೆಯಲಾಗಿದೆ.
ರೋಹಿತ್ ಪದಕಿ ಅವರು ದಯವಿಟ್ಟು ಗಮನಿಸಿ, ರತ್ನನ್ ಪ್ರಪಂಚ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದು ಈಗ ಅವರು ಕೆ ಆರ್ ಜಿ ಸ್ಟುಡಿಯೋಸ್ ನಿರ್ಮಾಣದ ಶಿವಣ್ಣ ಮತ್ತು ಡಾಲಿ ಧನಂಜಯ ಅಭಿನಯದ ಉತ್ತರಕಾಂಡ ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯಕ್ಕೆ ಈ ಸಿನಿಮಾದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುವುದರಿಂದ ಯವ೦2 ಸಿನಿಮಾದ ಚಿತ್ರೀಕರಣ ಯಾವಾಗ ಪ್ರಾರಂಭವಾಗಬಹುದು ಎನ್ನುವ ಮಾಹಿತಿ ಇಲ್ಲ. ಚಿತ್ರದ ಟೈಟಲ್ ಅನ್ನು ಕನ್ನಡ ರಾಜ್ಯೋತ್ಸವದಂದು ಬಿಡುಗಡೆ ಮಾಡಲಾಗುವುದು ಎಂದು ಚಿತ್ರದಂಡ ತಮ್ಮ ಮೊದಲ ಪೋಸ್ಟರ್ ನಲ್ಲಿ ತಿಳಿಸಿದ್ದಾರೆ.