ರಾಕಿಂಗ್ ಸ್ಟಾರ್ ಯಶ್ ಅವರು ಕನ್ನಡ ಮಾತ್ರವಲ್ಲದೆ ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟ. ಯಶ್ ಅವರು ಕೆಜಿಎಫ್ ನ ನಂತರ ಫ್ಯಾನ್ ಇಂಡಿಯಾ ಸ್ಟಾರ್ ಆದರು. ಇತ್ತೀಚಿಗೆ ಕೆಜಿಎಫ್ ಗೆ ರಾಷ್ಟ ಪ್ರಶಸ್ತಿ ಲಭಿಸಿದೆ. ಕೆಜಿಎಫ್ ಬಿಡುಗಡೆಯಾಗಿ 2 ವರ್ಷಗಳು ಕಳೆದರೂ ಯಶ್ ಅವರ ಯಾವುದೇ ಸಿನಿಮಾ ತೆರೆಯ ಮೇಲೆ ಬರಲಿಲ್ಲ. ಆದರೆ ಜಾಹೀರಾತಿನ ಮೂಲಕ ಆಗ ಆಗ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ಇನ್ನೊಂದು ಜಾಹೀರಾತುವಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಜಾಹೀರಾತುವಿನಲ್ಲಿ ಯಶ್ ಅವರು ಲಾಯರ್ ಆಗಿ ಕರಿ ಕೋಟು ಧರಿಸಿದ್ದಾರೆ. ಇವರ ಈ ಹೊಸ ಲುಕ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ಈ ಹಿಂದೆ ಪೆಪ್ಸಿ(Pepsi) ಮತ್ತು ಫ್ರೀಡಂ ರಿಪೈಂಡ್ (Freedom Refined Sunflower Oil) ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈಗ ಹೊಸ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇವರ ಟಾಕ್ಸಿಕ್ ಸಿನಿಮಾ ಸೆಟ್ಟೇರಿದ್ದು, ಮುಂದಿನ ವರ್ಷ ಅಂದರೆ 2025ರಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಮೊದಲ ಶೆಡ್ಯೂಲನ್ನು ಬೆಂಗಳೂರುನಲ್ಲಿ ಮುಗಿಸಿ, ಚಿತ್ರ ತಂಡ ಎರಡನೇ ಶೆಡ್ಯೂಲ್ ಗೆ ಮುಂಬೈಗೆ ತೆರಳಲಿದ್ದಾರೆ. ಸಿನಿಮಾಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಆಕ್ಷನ್ ಕಟ್ ಹೇಳಿದ್ದು, ಕನ್ನಡ ಹೆಮ್ಮೆಯ ಪ್ರೊಡಕ್ಷನ್ ಹೌಸ್ ಕೆವಿಯನ್ ಪ್ರೊಡಕ್ಷನ್ ನಿರ್ಮಿಸುತ್ತಿದ್ದಾರೆ. ಇವರೊಡನೆ ಯಶ್ ಅವರ ಮೊನ್ಸ್ಟಾರ್ ಕ್ರಿಯೆಶನ್ ( Monster Creation) ಕೂಡ ನಿರ್ಮಾಣಕ್ಕೆ ಕೈ ಜೋಡಿಸಿದೆ.
ಈಗಲೇ ಓದಿ: ಟಾಕ್ಸಿಕ್ ಸಿನಿಮಾ ಸ್ಥಗಿತಗೊಂಡಿದ್ಯಾ??