ಕಿಚ್ಚ ಸುದೀಪ್ ಮತ್ತು ಅನುಪ್ ಭಂಡಾರಿ ಸಂಯೋಜನೆ 'ಬಿಲ್ಲ ರಂಗ ಬಾಷ' ಇನ್ನೇನು ಚಿತ್ರೀಕರಣ ಹಂತಕ್ಕೆ ತಲುಪಿದೆ. ಸುದೀಪ್ ಮತ್ತು ಅನುಪ್ ಭಂಡಾರಿ ಅವರ ಎರಡನೇ ಸಂಯೋಜನೆಯಾಗಿದ್ದು, ಅಭಿಮಾನಿಗಳು ಬಹಳಷ್ಟು ಕುತೂಹಲದಿಂದ ಈ ಸಿನಿಮಾಕ್ಕಾಗಿ ಕಾಯುತ್ತಿದ್ದರೆ.
ಸಿನಿಮಾ ತಂಡದಿಂದ ಯಾವುದೇ ಅಪ್ಡೇಟ್ ಇಲ್ಲದೇ ಇದ್ದರೂ ಸುದೀಪ್ ಅವರು ಸಿನಿಮಾಕ್ಕಾಗಿ ತಯಾರಾಗುತ್ತಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ತಮ್ಮ ಫಿಟ್ನೆಸ್ ನ ಫೋಟೋವನ್ನು ಹಂಚಿಕೊಂಡಿದ್ದರು. ಇದೀಗ ಸಿಕ್ಸ್ ಪ್ಯಾಕ್ ನ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು "ಗುರಿಯತ್ತ ಇನ್ನೂ ಕೆಲವು ಹೆಜ್ಜೆಗಳನ್ನು ನಿರ್ವಹಿಸಿದ್ದಾರೆ" ಎಂದು ಬರೆದಿದ್ದಾರೆ.
ಸುದೀಪ್ ಅವರು ಸಿಕ್ಸ್ ಪ್ಯಾಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸುದೀಪ್ ಅವರು ಯಾವ ಸಿನಿಮಾಕ್ಕೂ ಈ ರೀತಿಯ ಫಿಟ್ನೆಸ್ ಕಾಯ್ದುಕೊಂಡಿಲ್ಲ. ಸ್ವತಃ ಅವರೇ ಹೇಳುವಂತೆ ಅವರಿಗೆ ಜಿಮ್ ಅಂದರೆ ಇಷ್ಟ ಇಲ್ಲವಂತೆ. ಚಿತ್ರ ಬಹಳಷ್ಟು ಸಾಹಸ ದೃಶ್ಯಗಳಿಂದ ಕೂಡಿರಬಹುದು ಹಾಗಾಗಿ ಸುದೀಪ್ ಅವರು ತಮ್ಮ ದೇಹದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ.