ಆಂಥೆಮ್ ಆಫ್ ಮಾರ್ಟಿನ್ : ಧ್ರುವ ಸರ್ಜಾ ಹೇರ್ ಸ್ಟೈಲ್ ಗೆ ಫಿದಾ ಆದ ಅಭಿಮಾನಿಗಳು

ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಅಕ್ಟೋಬರ್ 11 ರಂದು ಪ್ರಪಂಚದಾದ್ಯಂತ 13 ಭಾಷೆಗಳಲ್ಲಿ ತೆರೆ ಕಾಣಲಿದೆ. ಚಿತ್ರದ ಮೇಲೆ ಬಹಳಷ್ಟು ಭರವಸೆಯನ್ನು ಇಡಲಾಗಿದೆ. 

ಚಿತ್ರ ತಂಡ ಇದೀಗ ಆಂಥೆಮ್ ಆಫ್ ಮಾರ್ಟಿನ್ ಹಾಡನ್ನು ಬಿಡುಗಡೆ ಮಾಡಿದೆ. ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಕೆಲವು ಗಂಟೆಗಳಲ್ಲಿ ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿದೆ. ಇನ್ನು ಈ ಹಾಡಿಗೆ ಮುರುಳಿ ಅವರು ನಿತ್ಯ ಸಂಯೋಜನೆ ಮಾಡಿದ್ದಾರೆ. ಮಣಿ ಶರ್ಮ ಈ ಹಾಡಿಗೆ ಸಂಗೀತ ನೀಡಿದ್ದು, ಚಿತ್ರದ ನಿರ್ದೇಶಕರಾದ ಎಪಿ ಅರ್ಜುನ್ ಅವರು ಈ ಹಾಡಿಗೆ ಸಾಲನ್ನು ಗೀಚಿದ್ದಾರೆ ಮತ್ತು ಪೃದ್ವಿ ಚಂದ್ರ ಅವರು ಹಾಡುವ ಮೂಲಕ ಜನರನ್ನು ಗೆದ್ದಿದ್ದಾರೆ. ಈಗಲೇ ಓದಿ: BRB: ಬಿಲ್ಲ ರಂಗ ಬಾಷ ಒಂದು ಆಕ್ಷನ್ ಪ್ಯಾಕೇಜ್ ಸಿನಿಮಾ.

ಸುಮಾರು 600ಕ್ಕೂ ಹೆಚ್ಚು ನೃತ್ಯಗಾರರನ್ನು ಈ ಹಾಡಿಗಾಗಿ ಬೆಳೆಸಿಕೊಳ್ಳಲಾಗಿದೆ. ಹಾಡಿನ ಚಿತ್ರೀಕರಣವನ್ನು ವಿದೇಶಗಳಲ್ಲಿ ಚಿತ್ರಿಸಲಾಗಿದೆ. ಈ ಹಾಡಿಗಾಗಿ ಸುಮಾರು 6 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. 

ಈ ಹಿಂದೆ ಬಿಟ್ಟ ಟ್ರೈಲರ್ ಜನರ ಮನಸ್ಸನ್ನು ಗೆದ್ದಿತ್ತು. ಆದರೆ ನಂತರ ಬಿಡುಗಡೆ ಮಾಡಿದ ಮೊದಲ ಹಾಡು 'ಜೀವ ನೀನೆ' ಅಷ್ಟಾಗಿ ಜನರಿಗೆ ಹಿಡಿಸಲಿಲ್ಲ. ಇದೀಗ ಈ ಹಾಡು ಒಳ್ಳೆಯ ಪ್ರತಿಕ್ರಿಯೆಯನ್ನು ಗಳಿಸುವ ಮೂಲಕ ಸಿನಿಮಾದ ಮೇಲೆ ಮತ್ತಷ್ಟು ಭರವಸೆಯನ್ನು ಉಂಟು ಮಾಡಿದೆ. 

ಮಾರ್ಟಿನ್ ಒಂದು ಬಿಗ್ ಬಜೆಟ್ ಫ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಸಿನಿಮಾ ಕನ್ನಡ, ತೆಲುಗು, ತಮಿಳ್, ಹಿಂದಿ, ಮಲಯಾಳಂ, ಬಂಗಾಳಿ ಹಾಗೂ ಇನ್ನೂ ಹಲವು ಭಾಷೆಗಳು ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಧ್ರುವ ಸರ್ಜಾ ಮತ್ತು ನಿರ್ಮಾಪಕರಾದ ಉದಯ್ ಮೆಹ್ತಾ ಅವರು ಸಿನಿಮಾದ ಪ್ರಚಾರದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾದ್ದರಿಂದ ಕೇವಲ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲೂ ಕೂಡ ತಮ್ಮ ಚಿತ್ರದ ಪ್ರಚಾರವನ್ನು ಮಾಡುತ್ತಿದ್ದಾರೆ.

Previous Post Next Post