BRB: ಬಿಲ್ಲ ರಂಗ ಬಾಷ ಒಂದು ಆಕ್ಷನ್ ಪ್ಯಾಕೇಜ್ ಸಿನಿಮಾ.

ಕಿಚ್ಚ ಸುದೀಪ್ ಮತ್ತು ಅನುಪ್ ಭಂಡಾರಿ ಸಂಯೋಜನೆ ಬಿಲ್ಲ ರಂಗ ಬಾಷ ಪ್ರೀಪ್ರೊಡಕ್ಷನ್ (Pre-production) ಹಂತದಲ್ಲಿದೆ. ಸುದೀಪ್ ಅವರ‌ ಹುಟ್ಟು ಹಬ್ಬದಂದು ಈ ಸಿನಿಮಾವನ್ನು ಘೋಷಿಸಿದ್ದಾರೆ. ವಿಕ್ರಾಂತ ರೋಣದ ಬಳಿಕ ಕಿಚ್ಚ ಸುದೀಪ್ ಮತ್ತು ಅನುಪ್ ಭಂಡಾರಿ ಎರಡನೇ ಸಂಯೋಜನೆ ಇದಾಗಿದೆ. ಸಿನಿಮಾವನ್ನು ಹನುಮಾನ್ ( HanuMan) ನಿರ್ಮಾಪಕರು ನಿರ್ಮಾಣ ಮಾಡಲಿದ್ದಾರೆ.

ಇದೀಗ ಕಿಚ್ಚ ಸುದೀಪ್ ಅವರು ತಮ್ಮ Instagram ಖಾತೆಯಲ್ಲಿ ವರ್ಕೌಟ್ (Work Out) ನಾ ಫೋಟೋವನ್ನು ಹಂಚಿಕೊಂಡಿದ್ದಾರೆ. ಬಿಲ್ಲ ರಂಗ ಬಾಷ ಆಕ್ಷನ್ ಪ್ಯಾಕೇಜ್ ಸಿನಿಮಾ ಆಗಿರಬಹುದು. ಹಾಗಾಗಿ ಸುದೀಪ್ ಅವರು ತಮ್ಮ ದೇಹದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸುದೀಪ್ ಮತ್ತು ಅನುಪ್ ಅವರ ಸಿನಿಮಾ ವೃತ್ತಿಯಲ್ಲೇ ಅತಿ ದೊಡ್ಡ ಸಿನಿಮಾ ಇದಾಗಲಿದೆ.‌ ಸಿನಿಮಾದ ಬಜೆಟ್ ಸುಮಾರು 140 ಕೋಟಿ ರೂಪಾಯಿಗಳು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಬಜೆಟನ್ನು ವಿಎಫ್ಎಕ್ಸ್ ( VFX ) ಗೆ ಖರ್ಚು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. 

Also Read: IMDb ಟಾಪ್ 250 ಅತ್ಯಧಿಕ-ರೇಟ್ ಪಡೆದ ಭಾರತೀಯ ಚಲನಚಿತ್ರಗಳು: ಕನ್ನಡದ ೮ ಚಲನಚಿತ್ರಗಳು ಈ ಪಟ್ಟಿಯಲ್ಲಿ ಸೇರಿವೆ

ಸಿನಿಮಾದ ಚಿತ್ರೀಕರಣ ಡಿಸೆಂಬರ್ನಲ್ಲಿ ಪ್ರಾರಂಭವಾಗಲಿದೆ. ಮತ್ತು ಮುಂದಿನ ವರ್ಷ 2025 ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಲಿದೆ. 

Previous Post Next Post