ತಲಪತಿ ವಿಜಯ್ ಅವರ 69ನೇ ಮತ್ತು ಕೊನೆಯ ಸಿನಿಮಾವನ್ನು ಇತ್ತೀಚಿಗೆ ಘೋಷಿಸಲಾಗಿತ್ತು. ಈ ಸಿನಿಮಾವನ್ನು ನಮ್ಮ ಸ್ಯಾಂಡಲ್ ವುಡಿನ ಹೆಮ್ಮೆಯ ಪ್ರೊಡಕ್ಷನ್ ಹೌಸ್ ಆದ ಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿದ್ದಾರೆ. ಮತ್ತು ಈ ಸಿನಿಮಾಕ್ಕೆ ಹೆಚ್ ವಿನೋತ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚಿಗೆ ಕೆವಿಎನ್ ಪ್ರೊಡಕ್ಷನ್ ತಮ್ಮ ಸಿನಿಮಾದ ಕಾಸ್ಟ್ ರವಿಲ್ ಮಾಡಿತ್ತು. ಸಿನಿಮಾದಲ್ಲಿ ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ, ಪ್ರಕಾಶ್ ರಾಜ್ ಮತ್ತು ಮಮಿತಾ ಬೈಜು ಮತ್ತು ಹಲವರು ಅಭಿನಯಿಸಲಿದ್ದಾರೆ. ಪೂಜಾ ಹೆಗ್ಗಡೆ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಿನಿಮಾದ ಮುಹೂರ್ತ ಪೂಜೆ ಇಂದು(Oct 04) ನಡೆಯಿತು. ತುಂಬಾ ಸರಳವಾಗಿ ನೆರವೇರಿದ ಈ ಮುಹೂರ್ತದಲ್ಲಿ ವಿಜಯ್, ಪೂಜಾ ಹೆಗಡೆ, ಬಾಬಿ ಡಿಯೋಲ್, ನಿರ್ದೇಶಕ ಹೆಚ್ ವಿನೋತ್, ನಿರ್ಮಾಪಕ ವೆಂಕಟ್. ಕೆ ನಾರಾಯಣ್ ಹಾಗೂ ಇನ್ನು ಹಲವರು ಸೇರಿದ್ದರು. ವಿಜಯ್ ಅವರ ಕೊನೆಯ ಸಿನಿಮಾ ಆದ್ದರಿಂದ ಈ ಸಿನಿಮಾದ ಮೇಲೆ ಬಹಳಷ್ಟು ಭರವಸೆ ಇದೆ. ನಾಳೆಯಿಂದ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ. ಸಿನಿಮಾದ ತಾರಾಗಣ ಮತ್ತು ಟೆಕ್ನಿಷಿಯನ್ಸ್ ಗಳನ್ನು ನೋಡಿ ಈ ಸಿನಿಮಾ ಒಂದು ಬಿಗ್ ಬಜೆಟ್ ಸಿನಿಮಾ ಎಂದು ನಾವು ಅರ್ಥೈಸಿಕೊಳ್ಳಬಹುದು. ಒಂದು ವರದಿಯ ಪ್ರಕಾರ ತಳಪತಿ ವಿಜಯ್ ಅವರು ಈ ಸಿನಿಮಾಕ್ಕಾಗಿ ಸುಮಾರು 250 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯಲಿದ್ದಾರೆ.
ಈ ಸಿನಿಮಾದ ಮೂಲಕ ವಿಜಯ್ ಅವರು ತಮ್ಮ ಸಿನಿಮಾ ಪಯಣಕ್ಕೆ ವಿದಾಯ ಘೋಷಿಸಲಿದ್ದಾರೆ. ನಂತರ ರಾಜಕೀಯದಲ್ಲಿ ತಮ್ಮ ಜೀವನವನ್ನು ಕಳೆಯಲಿದ್ದಾರೆ. ಸಿನಿಮಾ ಮುಂದಿನ ವರ್ಷ 2025 ಅಕ್ಟೋಬರ್ ರಂದು ಬಿಡುಗಡೆಯಾಗಲಿದ್ದೆ ಎಂದು ಸಿನಿಮಾ ತಂಡ ತಿಳಿಸಿದೆ. ತಮಿಳ್ ಸೇರಿದಂತೆ ತೆಲುಗು ಮತ್ತು ಹಿಂದಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.