ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ನ ನಂತರ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಜೊತೆ ಟಾಕ್ಸಿಕ್ ಎಂಬ ಸಿನಿಮಾ ಮಾಡುತ್ತಿರುವುದು ನಮಗೆಲ್ಲಾ ತಿಳಿದ ವಿಚಾರವೇ. ಆಗಸ್ಟ್ 8ರಂದು ಸಿನಿಮಾದ ಮುಹೂರ್ತ ಪೂಜೆಯನ್ನು ಮುಗಿಸಿ, ಇದೀಗ ಚಿತ್ರೀಕರಣದ ಹಂತದಲ್ಲಿದೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಟಾಕ್ಸಿಕ್ ಸಿನಿಮಾ ಸ್ಥಗಿತಗೊಂಡಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಒಂದು ಮಾಹಿತಿ ಪ್ರಕಾರ ಸಿನಿಮಾ ತಂಡ ಮೊದಲ ಶೆಡ್ಯೂಲನ್ನು ಪೂರ್ಣಗೊಳಿಸಿದ್ದು, ಎರಡನೇ schedule ಗಾಗಿ ಮುಂಬೈನಲ್ಲಿ ಸೆಟ್ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದ ಟಾಕ್ಸಿಕ್ ಇನ್ನೂ ಸ್ಥಗಿತವಾಗಿಲ್ಲ ಎಂದು ದೃಢಪಟ್ಟಿದೆ.
ಈ ಸಿನಿಮಾ ಕೆಜಿಎಫ್ ಗಿಂತಲೂ ಅಧಿಕ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ಒಂದು ಮಾಹಿತಿಯ ಪ್ರಕಾರ ಸುಮಾರು 200 ಕೋಟಿ ಎಂದು ಅಂದಾಜಿಸಲಾಗಿದೆ. ಹಾಗಾಗಿ ಸಿನಿಮಾದ ಚಿತ್ರೀಕರಣ ಮತ್ತಷ್ಟು ತಡವಾಗುತ್ತಿದೆ. ಸಿನಿಮಾದಲ್ಲಿ ನಯಂತರಾ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ಇದು ಇವರ ಜೀವನದ ದುಬಾರಿ ಸಿನಿಮಾ ಎಂದು ಹೇಳಲಾಗುತ್ತಿದೆ.
ಟಾಕ್ಸಿಕ್ ಒಂದು ಡ್ರಗ್ ಮಾಫಿಯಾಕ್ಕೆ ಸಂಬಂಧಿಸಿದ ಕಥೆಯಾಗಿದೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಸಿನಿಮಾ ತಂಡದಿಂದ ಟೈಟಲ್ ಟೀಸರ್ ಬಿಟ್ಟರೆ ಬೇರೆ ಯಾವುದೇ ಅಪ್ಡೇಟ್ ಬಂದಿಲ್ಲ. ಮೊದಲ ಷೆಡ್ಯೂಲ್ ಕಂಪ್ಲೀಟ್ ಆದ್ದರಿಂದ ಮುಂದಿನ ಅಥವಾ ಈ ತಿಂಗಳ ಕೊನೆಯಲ್ಲಿ ನಾವು ಟಾಕ್ಸಿಕ್ ನ ಅಪ್ ಡೇಟ್ ಅನ್ನು ನಿರೀಕ್ಷಿಸಬಹುದು. ಈಗಾಲೇ ಓದಿ: ಆಂಥೆಮ್ ಆಫ್ ಮಾರ್ಟಿನ್ : ಧ್ರುವ ಸರ್ಜಾ ಹೇರ್ ಸ್ಟೈಲ್ ಗೆ ಫಿದಾ ಆದ ಅಭಿಮಾನಿಗಳು