Bigg Boss Kannada: ಬಿಗ್ ಬಾಸ್ ಕನ್ನಡಕ್ಕೆ ವಿದಾಯ ಘೋಷಿಸಿದ ಕಿಚ್ಚ ಸುದೀಪ್

ಬಿಗ್ ಬಾಸ್ ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ. ಬಿಗ್ ಬಾಸ್ ಕನ್ನಡ ತನ್ನ10 ಸೀಸನ್ ಗಳನ್ನು ಮುಗಿಸಿ ಇದೀಗ 11ನೇ ಸೀಸನ್ ಗೆ ಕಾಲಿಟ್ಟಿದೆ. ಬಿಗ್ ಬಾಸ್ ಸೀಸನ್ 11 ಪ್ರಾರಂಭವಾದ ಕೇವಲ ಎರಡೇ ವಾರದಲ್ಲಿ 9.9 ಟೆಲಿವಿಷನ್ ರೇಟಿಂಗನ್ನು ಪಡೆದಿದೆ. 

ವಿದಾಯ ಘೋಷಿಸಿದ ಕಿಚ್ಚ 

ಕಳೆದ ಹತ್ತು ವರ್ಷಗಳಿಂದ ಮತ್ತು ಈ ವರ್ಷ ಕೂಡ ಬಿಗ್ ಬಾಸ್ ಕನ್ನಡದಲ್ಲಿ ಕಿಚ್ಚ ಸುದೀಪ್ ಅವರೇ ಹೋಸ್ಟಾಗಿ ಕಾಣಿಸಿಕೊಂಡಿದ್ದಾರೆ. ಕಿಚ್ಚ ಅವರ ನಿರೂಪಣೆಯನ್ನು ಕರ್ನಾಟಕದ ಜನತೆಗೆ ಇಷ್ಟಪಟ್ಟಿದ್ದಾರೆ. ಈ ಸೀಸನನ್ನು ಕಿಚ್ಚ ಸುದೀಪ್ ಅವರು ನೀರೂಪಣೆ ಮಾಡುವುದಿಲ್ಲ ಎನ್ನುವ ಸುದ್ದಿ ಈ ಹಿಂದೆ ಬಿಗ್ ಬಾಸ್ ಆರಂಭದಲ್ಲಿ ಎಲ್ಲೆಡೆ ಒಡಾಡಿತ್ತು. ರಿಷಬ್ ಶೆಟ್ಟಿ ಅವರು ಈ ಸೀಸನ್ ನಿರೂಪಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ನಂತರ ಸ್ವತಃ ಕಲರ್ಸ್ ಕನ್ನಡ ವಾಹಿನಿಯೆ ಸುದೀಪ್ ಅವರು ನಿರೂಪಣೆ ಮಾಡಲಿದ್ದಾರೆ ಎಂದು ಖಾತ್ರಿ ಪಡಿಸಿತ್ತು.


ಆದರೆ ಇದೀಗ ಸುದೀಪ್ ಅವರೇ ಸ್ವತಃ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೋಸ್ಟಾಗಿ ಇದು ನನ್ನ ಕೊನೆಯ ಸೀಸನ್ ಆಗಲಿದೆ ಎಂದು ಹೇಳಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸುದೀಪ್ ಮತ್ತು ಬಿಗ್ ಬಾಸ್ ನ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ಇಲ್ಲದ ಬಿಗ್ ಬಾಸ್ ನ್ನು ಊಹಿಸಿಕೊಳ್ಳಲು ಸಾದ್ಯವಿಲ್ಲ ಮತ್ತು ಸುದೀಪ್ ಅವರ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರಣ

ಸುದೀಪ್ ಅವರು ತಮ್ಮ ಮುಂದಿನ ಸಿನಿಮಾಗಳಲ್ಲಿ ಹೆಚ್ಚಿನ ಗಮನಹರಿಸಬೇಕು ಎಂದು ಬಿಗ್ ಬಾಸ್ ಗೆ ವಿದಾಯ ಘೋಷಿಸಲಿದ್ದಾರೆ. ಬಿಗ್ ಬಾಸ್ ಜೊತೆ ಸಿನಿಮಾವನ್ನು ನಿಭಾಯಿಸುವುದು ಬಹುಶಃ ಕಷ್ಟ ವಾಗುತ್ತಿರಬಹುದು. ಮುಂದಿನ ಸಿನಿಮಾ ಬಿಲ್ಲ ರಂಗ ಬಾಷ ಬಹಳಷ್ಟು ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ ಮತ್ತು ಈ ಸಿನೆಮಾದ ಜೊತೆ ಇನ್ನೂ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಸಿನಿಮಾ ಜೊತೆ ಬಿಗ್ ಬಾಸ್ ನಿರ್ವಹಿಸಲು ಕಷ್ಟವಾಗಬಹುದು. ಈ ಕಾರಣದಿಂದ ಬಿಗ್ ಬಾಸ್ ಗೆ ವಿದಾಯ ಘೋಷಿಸಲಿದ್ದಾರೆ.

Previous Post Next Post