ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ಕನ್ನಡವನ್ನು ನಿರೂಪಣೆ ಮಾಡಿಕೊಂಡು ಬಂದಿದ್ದ ಕಿಚ್ಚ ಸುದೀಪ್ ಅವರು ಇತ್ತೀಚೆಗೆ ದಿಢೀರನೆ ನಿರೂಪಕನಾಗಿ ಇದು ನನ್ನ ಕೊನೆಯ ಸೀಸನ್ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸುದೀಪ್ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರು. ಇದೀಗ ಇದರ ಹಿಂದೆ ಇರುವ ಅಸಲಿ ಸತ್ಯ ಬಯಲಾಗಿದೆ.
ಸುದೀಪ್ ಅವರ ಈ ನಿರ್ಧಾರದಿಂದ ಕರ್ನಾಟಕದ ಜನತೆಗೆ ಬೇಸರವಾಗಿತ್ತು. ಇವರ ಈ ನಿರ್ಧಾರಕ್ಕೆ ಕಾರಣ ಸ್ವತಃ ಬಿಗ್ ಬಾಸ್ ತಂಡವೇ ಆಗಿದೆ. ಸುದೀಪ್ ಅವರು ಗೌರವ ಸಿಗದ ಕಡೆ ಒಂದು ಕ್ಷಣವು ನಿಲ್ಲುವುದಿಲ್ಲ ಹಾಗಾಗಿ ಬಿಗ್ ಬಾಸ್ ಸುದೀಪ್ ಅವರನ್ನು ಅಗೌರವಿಸೆದೆಯ ಎನ್ನುವ ವಿಚಾರ ಎಲ್ಲರ ತಲೆಯಲ್ಲಿ ಮೂಡಿದೆ. ಬಿಗ್ ಬಾಸ್ ತಂಡದವರ ಈ ನಡವಳಿಕೆಯಿಂದ ಬೇಸರವಾಗಿದೆಯಾ?
ಈ ವರ್ಷ ಬಿಗ್ ಬಾಸ್ ಮನೆಯಲ್ಲಿ ಕನ್ನಡಕ್ಕಿಂತ ಇಂಗ್ಲಿಷ್ ಹೆಚ್ಚಾಗಿ ಕೇಳಿ ಬರುತ್ತಿದೆ. ಇದರ ವಿರುದ್ಧ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಸುದೀಪ್ ಅವರಿಗೂ ಇದೇ ಭಾವನೆ ಮೂಡಿದೆ. ಇನ್ನು ಈ ಹಿಂದೆ ಯಾರಾದರೂ ಬಿಗ್ ಬಾಸ್ ಮನೆಯಲ್ಲಿ ಇಂಗ್ಲಿಷ್ ಮಾತನಾಡಿದರೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಹಾಡನ್ನು ಹಾಕಲಾಗುತ್ತಿತ್ತು. ಆದರೆ ಕಳೆದೆರೆಡು ಸೀಸನ್ ಗಳಿಂದ ಇದು ಕಣ್ಮರೆಯಾಗಿದೆ. ಹೀಗಾಗಿ ಸುದೀಪ್ ಅವರು ಕನ್ನಡ ಹೆಚ್ಚಾಗಿ ಬಳಸಲು ಹೇಳಿದ್ದಾರೆ. ಆದರೆ ಇದನ್ನು ಆಯೋಜಕರು ಕ್ಯಾರೇ ಅನ್ನಲಿಲ್ಲ.
ಕಾರಣ ಬಿಗ್ ಬಾಸ್ ನ ನಿರ್ದೇಶಕರು ಮತ್ತು ಆಯೋಜಕರು ಬದಲಾಗಿದ್ದಾರೆ. ಬಿಗ್ ಬಾಸ್ ನ ನಿರ್ದೇಶಕರು ತಮಿಳಿನವರು ಮತ್ತು ಆಯೋಜಕರು ಮರಾಠಿಯವರು. ಹಾಗಾಗಿ ಇದರ ಬಗ್ಗೆ ಯಾರು ಕ್ಯಾರೇ ಅನ್ನಲಿಲ್ಲ.
ಈ ಬಾರಿ ಸ್ವರ್ಗ ಮತ್ತು ನರಕ ಎಂಬ ಹೊಸ ಪರಿಕಲ್ಪನೆಯನ್ನು ಮಾಡಲಾಗಿತ್ತು. ಆದರೆ ನರಕದಲ್ಲಿ ಮಹಿಳೆಯರಿಗೆ ಶೌಚಾಲಯ ಇರಲಿಲ್ಲ. ವ್ಯವಸ್ಥೆ ಮಾಡುವಂತೆ ಸುದೀಪ್ ಕೇಳಿಕೊಂಡರು ಅದನ್ನೂ ಕೇಳಿಸಿಕೊಳ್ಳಲಿಲ್ಲ. ಇನ್ನು ವಾರದ ಅಂತ್ಯದ ವಾರದ ಕಥೆ ಕಿಚ್ಚನ ಜೊತೆ ಸಮಯದಲ್ಲಿ ನರಕದಲ್ಲಿದ್ದ ಸ್ಪರ್ಧಿಗಳು ನಿಂತುಕೊಂಡೆ ಮಾತನಾಡಬೇಕಿತ್ತು. ಹೀಗಾಗಿ ಅವರನ್ನು ಕೂರಿಸಿ ಮಾತನಾಡುವಂತೆ ಸುದೀಪ್ ಸಲಹೆ ನೀಡಿದರು. ಆದರೆ ಇದನ್ನೂ ಕೂಡ ಆಯೋಜಕರು ಗಂಭೀರವಾಗಿ ಪರಿಗಣಿಸಿಲ್ಲ.
ಈ ಎಲ್ಲಾ ಕಾರಣಗಳಿಂದ ಸುದೀಪ್ ಅವರು ಬಿಗ್ ಬಾಸನ್ನು ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ತಮ್ಮ ಎಕ್ಸ್ ಖಾತೆಯಲ್ಲಿ ವಿವರಿಸಿದ್ದಾರೆ.