ಬಿಗ್ ಬಾಸ್ ಕನ್ನಡದ ನಂಬರ್ ಒನ್ ರಿಯಾಲಿಟಿ ಶೋ. ಕಳೆದ ಹತ್ತು ವರ್ಷಗಳಿಂದ ಕಿಚ್ಚ ಸುದೀಪ್ ಅವರೆ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಈ ವರ್ಷ ಕೂಡ ಇವರೇ ನಿರೂಪಣೆ ಮಾಡುತ್ತಿದ್ದಾರೆ. ಆದರೆ ಇತ್ತೀಚಿಗೆ ಸುದೀಪ್ ಅವರು ಆ ಒಂದು ನಿರ್ಧಾರಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಗೆ ವಿದಾಯ ಹೇಳಿದ ಕಿಚ್ಚ ಸುದೀಪ್ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಎಲ್ಲರೂ ಇವರ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಿಚ್ಚ ಸುದೀಪ್ ಅವರು ಇದು ನನ್ನ ಕೊನೆಯ ಸೀಸನ್ ಇನ್ನು ಮುಂದೆ ನಾನು ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಹೇಳುತ್ತಿದ್ದಂತೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ತಮ್ಮ ಅಭಿಪ್ರಾಯವನ್ನು X ಖಾತೆಯಲ್ಲಿ ಹಂಚಿಕೊಂಡಿದ್ದರು.
ಇವರ ಪ್ರಕಾರ ಬಿಗ್ ಬಾಸ್ ಆಯೋಜಕರು ಕಿಚ್ಚ ಸುದೀಪ್ ಅವರ ಮಾತನ್ನು ಕೇಳಿಸಿ ಕೊಳ್ಳುತ್ತಿರಲಿಲ್ಲ. ಕಿಚ್ಚ ಸುದೀಪ್ ಅವರಿಗೆ ಗೌರವ ನೀಡುತ್ತಿಲ್ಲ. ಈ ಕಾರಣಗಳಿಂದ ಸುದೀಪ್ ಅವರು ಬೇಸರ ಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈಗ ಇದಕ್ಕೆ ಸ್ವತಃ ಸುದೀಪ್ ಅವರೆ X ನಲ್ಲಿ ಟ್ವೀಟ್ ಮಾಡುವ ಮೂಲಕ ಉತ್ತರ ನೀಡಿದ್ದಾರೆ. "ನನ್ನ ಟ್ವೀಟ್ ಬಗ್ಗೆ ನನ್ನ ದಾರಿಯಲ್ಲಿ ಬರುವ ಎಲ್ಲಾ ಪ್ರೀತಿ ಮತ್ತು ಬೆಂಬಲವನ್ನು ನಾನು ಪ್ರಶಂಸಿಸುತ್ತೇನೆ; ಇದು ನಿಜವಾಗಿಯೂ ನನ್ನನ್ನು ಪ್ರೀತಿಸುವಂತೆ ಮಾಡುತ್ತದೆ. ಆದಾಗ್ಯೂ, ಚಾನಲ್ ಮತ್ತು ನನ್ನ ನಡುವಿನ ಯಾವುದೇ ಘರ್ಷಣೆಗಳ ಬಗ್ಗೆ ಊಹೆಗಳನ್ನು ಮಾಡದಂತೆ ಕಾಮೆಂಟ್‌ಗಳು ಮತ್ತು ವೀಡಿಯೊಗಳನ್ನು ರಚಿಸುವವರಿಗೆ ನಾನು ದಯೆಯಿಂದ ಕೇಳುತ್ತೇನೆ. ನಾವು ಸುದೀರ್ಘ ಮತ್ತು ಸಕಾರಾತ್ಮಕ ಪ್ರಯಾಣವನ್ನು ಹಂಚಿಕೊಂಡಿದ್ದೇವೆ ಮತ್ತು "ಅಗೌರವ" ಎಂಬ ಪದವನ್ನು ಅದರೊಂದಿಗೆ ಸಂಯೋಜಿಸಬಾರದು. ಈ ಸಮಸ್ಯೆಯ ಸುತ್ತಲಿನ ಯಾವುದೇ ಊಹೆಗಳು ಆಧಾರರಹಿತವಾಗಿವೆ ಮತ್ತು ಸಮರ್ಥನೆಯ ಕೊರತೆಯಿದೆ. ನನ್ನ ಟ್ವೀಟ್ ನೇರ ಮತ್ತು ಪ್ರಾಮಾಣಿಕವಾಗಿದೆ. ಕಲರ್ಸ್ ನೊಂದಿಗೆ ನನ್ನ ಸಂಬಂಧ ಅದ್ಭುತವಾಗಿದೆ ಮತ್ತು ಅವರು ಯಾವಾಗಲೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ. ಪ್ರಕಾಶ್, ನಿರ್ದೇಶಕರು ನಂಬಲಾಗದಷ್ಟು ಪ್ರತಿಭಾವಂತ ಮತ್ತು ಶಕ್ತಿಯುತ ವ್ಯಕ್ತಿ, ಮತ್ತು ನಾನು ಅವರ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದೇನೆ. ನಾನು ಕೆಲಸ ಮಾಡುತ್ತಿರುವ ತಂಡವು ಅನಗತ್ಯ ಆರೋಪಗಳನ್ನು ಎದುರಿಸುತ್ತಿರುವಾಗ ಸುಮ್ಮನೆ ಕುಳಿತು ಆನಂದಿಸುವವನಲ್ಲ." ಎಂದು ಹೇಳಿದ್ದಾರೆ.