ಬಿಗ್ ಬಾಸ್ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ. ಈ ದೊಡ್ಡ ಮನೆಗೆ ಹೋಗಲು ಎಲ್ಲರೂ ತುದಿ ಕಾಲಲ್ಲಿ ನಿಂತಿರುತ್ತಾರೆ. ಆದರೆ ಅವಕಾಶ ಸಿಕ್ಕವರು ಅದನ್ನ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿಲ್ಲ.
ಬಿಗ್ ಬಾಸ್ ಸೀಸನ್ 11ರ 11ನೇ ಸ್ಪರ್ಧಿಯಾದ ಲಾಯರ್ ಜಗದೀಶ್ ಅವರು ಮನೆಯ ಕಾಲಿಟ್ಟ ಒಂದೇ ವಾರದಲ್ಲಿ ಉಳಿದ 16 ಸ್ಪರ್ಧಿಗಳೊಡನೆ ಜಗಳವಾಡಿ ಎಲ್ಲರ ಗಮನಸೆಳೆದ್ದಿದ್ದರು. ಅದಲ್ಲದೆ ಬಿಗ್ ಬಾಸನ್ನೆ ನಿಲ್ಲುಸುತ್ತಿನಿ ಎಂದು ಬಿಗ್ ಬಾಸ್ ಗೆ ಅವಾಜ್ ಹಾಕಿದ್ದಾರೆ. ಅದರ ನಂತರ ಸುದೀಪ್ ಅವರು ಅವರಿಗೆ ಬುದ್ಧಿ ಮಾತು ಹೇಳಿದರು. ಎಲ್ಲರು ತಮ್ಮ ಇತಿ ಮಿತಿಯನ್ನು ಮೀರುತ್ತಿದ್ದಂತೆ ಯಾರು ಯಾವಾಗ ಬೇಕಾದರೂ ಮನೆಯಿಂದ ಹೊರಗೆಬಹುದು ಎಂದು ಮನೆಯಲ್ಲಿರುವ ಎಲ್ಲರಿಗೂ ಸುದೀಪ್ ಅವರು ಸೂಚನೆ ನೀಡಿದ್ದರು.
ಆದರೆ ಇದೀಗ ಮತ್ತೆ ಜಗದೀಶ್ ಅವರು ರೊಚ್ಚಿಗೆದ್ದಾರೆ. ಕಲರ್ಸ್ ವಾಹಿನಿಯ ಇವತ್ತಿನ (ಅಕ್ಟೋಬರ್ 16) ಎಪಿಸೋಡ್ ಪ್ರೊಮೋವನ್ನು ಬಿಡುಗಡೆ ಮಾಡಿದೆ. ಪ್ರೋಮೋದಲ್ಲಿ ಲಾಯರ್ ಜಗದೀಶ್ ಮತ್ತು ರಂಜಿತ್ ಅವರು ನಡುವೆ ದೊಡ್ಡ ಜಗಳವೆ ನಡೆದಿದೆ. ಮನೆಯರ ಎಷ್ಟೆ ಬಿಡಿಸಲು ಪ್ರಯತ್ನಿಸಿದರು ಅವರಿಬ್ಬರೂ ಜಗಳವಾಡುವುದನ್ನು ನಿಲ್ಲಿಸಲಿಲ್ಲ. ಈ ಕಾರಣದಿಂದ ಲಾಯರ್ ಜಗದೀಶ್ ಮತ್ತು ರಂಜಿತ್ ಅವರನ್ನ ದೊಡ್ಡ ಮನೆಯಿಂದ ಹೊರಗೆ ಹಾಕಲಾಗಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.