ರಜನಿಕಾಂತ್ ಅವರ ವೆಟ್ಟೆಯ್ಯಾನ್ ಸಿನಿಮಾ ಬಿಡುಗಡೆಯಾಗಿ ಇದೀಗ ಎರಡು ವಾರಗಳಾದರೂ ಇನ್ನೂ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಕರ್ನಾಟಕ ಬಾಕ್ಸ್ ಆಫೀಸ್ ನಲ್ಲಿ ತಲೈವರ್ ಸಿನಿಮಾ ಸದ್ದು ಮಾಡುತ್ತಿದೆ. ಮೊದಲ ವಾರಕ್ಕೆ ಉಳಿಸಿದರೆ 2ನೇ ವಾರದಲ್ಲಿ ಬಾಕ್ಸ್ ಆಫೀಸ್ ನ ಕಲೆಕ್ಷನ್ ಕಡಿಮೆಯಾಗಿದೆ.
ಟಿ.ಜೆ. ಜ್ಞಾನವೆಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಲೈಕಾ ಪ್ರೊಡಕ್ಷನ್ ನ ಸುಬಾಸ್ಕರನ್ ಅಲ್ಲಿರಾಜ ಅವರು ಬಂಡವಾಳ ಹೂಡಿದ್ದಾರೆ. ರಜನಿಕಾಂತ್ ಅವರ ಜೊತೆಗೆ ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಂಗುಬಾಟಿ, ಮಂಜು ವಾರಿಯರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯ ತಲೈವಾರ್ ವೆಟ್ಟೆಯ್ಯಾನ್ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ವೆಟ್ಟೆಯ್ಯಾನ್ ವಿರುದ್ಧವಾಗಿ ಯಾವುದೇ ದೊಡ್ಡ ಸಿನಿಮಾ ಬಿಡುಗಡೆಯಾಗದಿರುವುದು ಸಿನಿಮಾಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಧ್ರುವ ಸರ್ಜಾ ಅವರ ಮಾರ್ಟಿನ್ ಬಿಡುಗಡೆಯಾದರೂ ಜನರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ. ಅದು ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಅಷ್ಟು ದೊಡ್ಡ ಸದ್ದನ್ನು ಮಾಡಿಲ್ಲ. ಅದು ಅಲ್ಲದೆ ಸದ್ಯದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಹಾಗಾಗಿ ವೆಟ್ಟೆಯ್ಯಾನ್ ಇನ್ನಷ್ಟು ದಿನಗಳ ಕಾಲ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುವುದು ಖಂಡಿತ.
ಚಿತ್ರ ಮೊದಲ ವಾರದಲ್ಲಿ ಕರ್ನಾಟಕದಲ್ಲಿ ಭಾರೀ ಕಲೆಕ್ಷನ್ ಮಾಡಿದೆ ಆದರೆ ಮೊದಲ ವಾರಾಂತ್ಯದ ನಂತರ ಇದೀಗ ಕೇವಲ ₹3.6 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಇಳಿಮುಖವನ್ನು ಕಂಡಿದೆ. ಕರ್ನಾಟಕದಲ್ಲಿ ಈವರೆಗೆ ಒಟ್ಟಾರೆ ಸುಮಾರು ₹22.85 ಕೋಟಿ ರೂಪಾಯಿಗಳನ್ನು ಗಳಿಸಿದೆ. ಸಿನಿ ತಜ್ಞರ ಪ್ರಕಾರ ದೀಪಾವಳಿಯ ಹೊತ್ತಿಗೆ ₹25 ಕೋಟಿ ರೂಪಾಯಿಗಳನ್ನು ಗಳಿಸುವ ಸಾಧ್ಯತೆ ಇದೆ.
ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಎಸ್.ಆರ್ ಕತೀರ್ ಛಾಯಾಗ್ರಹಣ ಮಾಡಿದ್ದು, ಫಿಲೋಮಿನ್ ರಾಜ್ ಅವರ ಸಂಕಲನವಿದೆ. ಸಿನಿಮಾ ಸುಮಾರು ₹300 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿದ್ದು, ಸಿನಿಮಾ ತಂಡದ ಪ್ರಕಾರ ಕಳೆದ ಸುಮಾರು ₹240 ಕೋಟಿ ರೂಪಾಯಿಗಳನ್ನು ಗಳಿಸಿದೆ.