ಕನ್ನಡದ ಸೂಪರ್ ಸ್ಟಾರ್ ಯಶ್ ಅವರು ಇತ್ತೀಚಿನ ದಿನಗಳಲ್ಲಿ ಯಾವುದೇ ಸಂದರ್ಶನದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ಇದ್ದಕ್ಕಿದ್ದಂತೆ ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಮಳಯಲಂ ನಿರ್ದೇಶಕಿ ಗೀತು ಮೋಹನ್ದಾಸ್ ಅವರ ಜೊತೆ ಟಾಕ್ಸಿಕ್ ಎಂಬ ಸಿನಿಮಾ ಮಾಡುತ್ತಿರುವುದು ನಮಗೆಲ್ಲಾ ತಿಳಿದ ವಿಚಾರವೇ.
ಸಿನಿಮಾದ ಚಿತ್ರೀಕರಣ ಪ್ರಾರಂಭಿಸಿ ಮೊದಲ ಸೆಡ್ಯೂಲ್ ಮುಗಿಸಿದರು ಚಿತ್ರ ತಂಡದಿಂದ ಯಾವುದೇ ಅಪ್ಡೇಟ್ ಬಂದಿಲ್ಲ. ಇದೀಗ ಸಂದರ್ಶನದಲ್ಲಿ ಟಾಕ್ಸಿಕ್ ಸಿನಿಮಾದ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಟಾಕ್ಸಿಕ್ ಒಂದು ಮಾಸ್ ಮತ್ತು ಮೆಗಾ ಎಂಟರ್ಟೈನಿಂಗ್ ಸಿನಿಮಾವಾಗಳಿದೆ ಎಂದು ಹೇಳಿದ್ದಾರೆ. DNEG ಟಾಕ್ಸಿಕ್ ಸಿನಿಮಾಗೆ VFX ಮಾಡಲಿದ್ದಾರೆ ಮತ್ತು ಸಿನೆಮಾ ಮತ್ತು ಟೆಕ್ನಾಲಜಿಯನ್ನು ಅರ್ಥ ಮಾಡಿಕೊಳ್ಳಲು ಎಲ್ಎ, ಯುಎಸ್ಎ(LA,USA) ನಲ್ಲಿ ಸಮಯವನ್ನು ಕಳೆದಿದ್ದೇನೆ ಎಂದು ಹಂಚಿಕೊಂಡರು. ವಿಶೇಷ ಏನೆಂದರೆ ಟಾಕ್ಸಿಕ್ ನ ಟೈಟಲ್ ಮತ್ತು ಟಾಗ್ ಲೈನನ್ನು ಸ್ವತಃ ಯಶ್ ಅವರೇ ನೀಡಿದರಂತೆ.
ಸಿನಿಮಾ ಘೋಷಿಸುವಾಗ ಸಿನಿಮಾ ಎಪ್ರಿಲ್ 10,2025 ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಸಿನಿಮಾ ಎಪ್ರಿಲ್ ನಲ್ಲಿ ಬಿಡುಗಡೆಯಾಗುತ್ತಿಲ್ಲ ಎಂಬ ವಿಚಾರ ಯಶ್ ಅವರ ಅಭಿಮಾನಿಗಳಿಗೆ ಮತ್ತಷ್ಟು ಬೇಸರ ಉಂಟುಮಾಡಿದೆ. ಯಶ್ ಅವರು ಪರದೆ ಮೇಲೆ ಬರೆದೆ ಬರೊಬ್ಬರಿ ಎರಡುವರೆ ವರ್ಷಗಳೇ ಕಳೆದಿವೆ. ಇದೀಗ ಅವರ ಟಾಕ್ಸಿಕ್ ಸಿನಿಮಾ ಕೂಡ ಮತ್ತಷ್ಟು ತಡವಾಗುತ್ತಿದೆ. ಆದರೆ ಯಶ್ ಅವರು ತಮ್ಮ ಅಭಿಮಾನಿಗಳಿಗೆ ಒಂದು ಭರವಸೆಯನ್ನ ನೀಡಿದ್ದಾರೆ. ನಿಮಗೆ ಬೇಸರ ಉಂಟುಮಾಡುವ ಸಿನಿಮಾದೊಂದಿಗೆ ಮಾತ್ರ ಬರುವುದಿಲ್ಲ ಎಂದಿದ್ದಾರೆ. ಈಗಲೇ ಓದಿ: Devara OTT: ದೇವರ ಓಟಿಟಿ ಬಿಡುಗಡೆ ಯಾವಾಗ? ಎಲ್ಲಿ?
ಇದರ ಜೊತೆಗೆ ಯಶ್ ಬಾಲಿವುಡ್ ಗೆ ಕಾಲಿಡುವುದು ಖಚಿತವಾಗಿದೆ. ಈ ಹಿಂದೆ ಯಶ್ ಅವರು ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈಗ ಸ್ವತಃ ಯಶ್ ಅವರೇ ಖಚಿತ ಪಡಿಸಿದ್ದಾರೆ. ನಿತೇಶ್ ಅವರ ರಾಮಾಯಣದಲ್ಲಿ ರಾವಣನಾಗಿ ಮತ್ತು ಕೋ ಪ್ರೋಡ್ಯುಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅವರೇ ಹೇಳಿದ್ದಾರೆ. ರಾಮಾಯಣ ಎರಡು ಭಾಗಗಳಲ್ಲಿ ಬರಲಿದ್ದು 2026ರಲ್ಲಿ ತೆರೆಗೆ ಬರಲಿದೆ. ರಾಮಾಯಣ ಭಾರತೀಯ ಚಿತ್ರರಂಗದಲ್ಲೇ ಅತೀ ದುಬಾರಿಯ ಸಿನಿಮಾ ವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.