ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಸಿನಿಮಾ ಪುಷ್ಪದ ಸಿಕ್ವೇಲ್ ಆದ ಪುಷ್ಪ 2 ಗೆ ಪ್ರೇಕ್ಷಕರು ಕಾಯುತ್ತಿದ್ದರೆ. ಸುಕುಮಾರ್ ಅವರ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಧನಂಜಯ, ಸೃತೆಜ್(Sritej) ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪುಷ್ಪ 2021 ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಈಗ ಅದರ ಮುಂದುವರಿದ ಭಾಗ ಪುಷ್ಪ 2 ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಇತ್ತೀಚಿಗೆ ದಿನಗಳಲ್ಲಿ ಸ್ಟಾರ್ ನಟರು ಫ್ಯಾನ್ ಇಂಡಿಯಾ ಸಿನಿಮಾದ ಕಡೆ ಮುಖ ಮಾಡಿದ್ದಾರೆ. ಸಿನಿಮಾಗಳು ಕೇವಲ ಒಂದೇ ಭಾಗವಲ್ಲದೇ ಎರಡೆರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಹೀಗಾಗಿ ವರ್ಷಕ್ಕೆ ಒಂದು ಸಿನಿಮಾಗಳನ್ನು ಮಾಡುತ್ತಿದ್ದ ನಟರು, ಈಗ ಎರಡು ಮೂರು ವರ್ಷಗಳು ಕಳೆದರೂ ಯಾವುದೇ ಸಿನಿಮಾ ತೆರೆಗೆ ಬರುತ್ತಿಲ್ಲ. ಇದರೊಡನೆ ಚಿತ್ರ ಬಿಡುಗಡೆ ದಿನಾಂಕ ಮುಂದಕ್ಕೆ ದುಡುತ್ತಿರುವುದು ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ.
ಈಗಲೇ ಓದಿ: Pushpa 2: ಬಿಡುಗಡೆಯ ಮುನ್ನವೇ ₹1000 ಕೋಟಿ?? ಥಿಯೇಟ್ರಿಕಲ್ ರೈಟ್ಸ್ ? ಓಟಿಟಿ? ಸಾಟ್ ಲೈಟ್? ಆಡಿಯೋ?
ಈ ಹಿಂದೆ ಪುಷ್ಪ 2 ಆಗಸ್ಟ್ 15ಕ್ಕೆ ಬಿಡುಗಡೆಯಾಗಲಿದೆ ಚಿತ್ರ ತಂಡ ಘೋಷಿಸಿತ್ತು. ಆದರೆ ಕಾರಣಾಂತರಗಳಿಂದ ಆ ದಿನ ಸಿನಿಮಾ ಬಿಡುಗಡೆಯಾಗಲಿಲ್ಲ. ಚಿತ್ರ ತಂಡ ನಂತರ ಡಿಸೆಂಬರ್ 6ಕ್ಕೆ ಬಿಡುಗಡೆ ಯಾಗುವುದು ಪಕ್ಕ ಎಂದಿತ್ತು. ಆದರೆ ಇದೀಗ ಸಂತೋಷದ ವಿಷಯ ಏನೆಂದರೆ ಪುಷ್ಪ 2 ಒಂದು ದಿನ ಮುಂಚಿತವಾಗಿ ಬಿಡುಗಡೆಯಾಗಲಿದೆ. ಹೌದು ಚಿತ್ರ ತಂಡ ಇತ್ತೀಚಿಗೆ ಬಿಟ್ಟ ಪೋಸ್ಟರ್ ನಲ್ಲಿ ಡಿಸೆಂಬರ್ 5 ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.
ಇತ್ತೀಚಿಗೆನ ಕೆಲವು ವರದಿಗಳ ಪ್ರಕಾರ ಪುಷ್ಪ 2 ಬಿಡುಗಡೆಯ ಮುನ್ನವೆ 1000 ಕೋಟಿ ರೂಪಾಯಿಗಳ ಪ್ರೀ ಬ್ಯುಸಿನೆಸ್ ಮಾಡಿಕೊಂಡಿದೆ ಎನ್ನಲಾಗಿದೆ. ಹಾಗಾಗಿ ಈ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾ ಎಲ್ಲಾ ಸಾಧ್ಯತೆಗಳಿವೆ. ಸಿನಿಮಾ ಇಲ್ಲಿವರೆಗೆ ಎರಡು ಹಾಡುಗಳನ್ನು ಬಿಡುಗಡೆ ಮಾಡಿದ್ದು, ಆ ಎರಡು ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿವೆ. ಇನ್ನೂ ಸಿನಿಮಾದ ಟ್ರೈಲರ್ ನವೆಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗಳಿದೆ ಎಂದು ಹೇಳಲಾಗುತ್ತಿದೆ.