ತೆಲುಗು ನಟ ಅಲ್ಲು ಅರ್ಜುನ್ ಅವರ ಬಹು ನಿರೀಕ್ಷಿತ ಸಿನಿಮಾ ಪುಷ್ಪ ದಿ ರೈಸ್ ನ ಸೀಕ್ವೆಲ್ ಆದ ಪುಷ್ಪ 2 ದಿ ರೂಲ್ ಬಹಳಷ್ಟು ಭರವಸೆಯನ್ನು ಉಂಟುಮಾಡಿದೆ. ಪುಷ್ಪ 350 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಪುಷ್ಪದ ಸೀಕ್ವೆಲ್ ಆದ ಪುಷ್ಪ 2 ಡಿಸೆಂಬರ್ 6ರಂದು ಬಿಡುಗಡೆಯಾಗಲು ಸಿದ್ದವಾಗುತ್ತಿದೆ. ಸಿನಿಮಾ ಬಿಡುಗಡೆಯ ಮುನ್ನವೇ ಪ್ರೀ ಬ್ಯುಸಿನೆಸ್ ವಿಚಾರದಲ್ಲಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಪುಷ್ಪ 2 ಗಳಿಸಿದೆ ಹಣವೆಷ್ಟು?
ಹೌದು ಪುಷ್ಪ 1 ಯಶಸ್ಸಿನ ನಂತರ ಇದರ ಸೀಕ್ವೆಲ್ ಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡ ಈ ಸಿನಿಮಾಕ್ಕೆ ಸುಕುಮಾರ್ ಅವರು ಆಕ್ಷನ್ ಕಟ್ ಹೇಳಿದ್ದಾರೆ ಮತ್ತು ಮೈತ್ರಿ ಮೂವಿ ಮೇಕರ್ಸ್ ಬಂಡವಾಳ ಹೂಡಿದ್ದಾರೆ. ಇದೀಗ ಪುಷ್ಪ 2 ಬಿಡುಗಡೆಯ ಮುನ್ನವೇ ₹1065 ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿಕೊಂಡಿದೆ. ಥಿಯೇಟ್ರಿಕಲ್ ರಿಲೀಸ್, ಓಟಿಟಿ ಹಕ್ಕು, ಸಾಟ್ ಲೈಟ್ ಹಕ್ಕು ಮತ್ತು ಆಡಿಯೊ ಹಕ್ಕುಗಳು ಒಟ್ಟು ಹಣ ₹1065 ಕೋಟಿ ರೂಪಾಯಿಗಳು. ಈಗಲೇ ಓದಿ: Devara OTT: ದೇವರ ಓಟಿಟಿ ಬಿಡುಗಡೆ ಯಾವಾಗ? ಎಲ್ಲಿ?
ಆಂಧ್ರಪ್ರದೇಶ ಮತ್ತು ತೆಲಂಗಾಣದ ಥಿಯೇಟ್ರಿಕಲ್ ರೈಟ್ಸ್ ₹220 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ಇನ್ನು ಉತ್ತರ ಭಾರತದ ರೈಟ್ಸ್ ₹200 ಕೋಟಿ ರೂಪಾಯಿಗಳು. ಓವರ್ಸೀಸ್ (ವಿದೇಶ) ರೈಟ್ಸ್ ₹120 ಕೋಟಿ ರೂಪಾಯಿಗಳು. ತಮಿಳುನಾಡಿನಲ್ಲಿ ₹50 ಕೋಟಿ, ಕರ್ನಾಟಕದಲ್ಲಿ 30 ಕೋಟಿ ಮತ್ತು ಕೇರಳದಲ್ಲಿ ₹20 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವ ಮೂಲಕ ಥಿಯೇಟ್ರಿಕಲ್ ರೈಟ್ಸ್ ನಿಂದ ಸುಮಾರು 640 ಕೋಟಿ ರೂಪಾಯಿಗಳನ್ನು ಗಳಿಸಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಓಟಿಟಿ ಹಕ್ಕುನ್ನು ನೆಟ್ ಫ್ಲಿಕ್ಸ್ ₹275 ಕೋಟಿಗೆ ಖರೀದಿಸಿದೆ ಎನ್ನಲಾಗುತ್ತಿದೆ. ಆಡಿಯೋ ರೈಟ್ಸ್ ಸುಮಾರು 65 ಕೋಟಿಗೆ ಮತ್ತು ಸಾಟ್ ಲೈಟ್ ರೈಟ್ಸ್ 85 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗೆ ಪುಷ್ಪ 2 ಬಿಡುಗಡೆ ಮುನ್ನವೇ 1065 ಕೋಟಿ ರೂಪಾಯಿಗಳ ಪ್ರೀ ಬ್ಯುಸಿನೆಸ್ ಮಾಡಿಕೊಂಡಿದೆ.
ಪುಷ್ಪ 2021 ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸನ್ನು ಶೇಕ್ ಮಾಡುವ ಮೂಲಕ ಆ ವರ್ಷದ ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿಗೆ ಸೇರಿತ್ತು. ಈಗ ಅದರ ಸೀಕ್ವೆಲ್ ಬಹಳ ಕುತೂಹಲ ಕೆರಳಿಸಿದ್ದು ಮತ್ತೆ ಬಾಕ್ಸ್ ಆಫೀಸಲ್ಲಿ ಸದ್ದು ಮಾಡುತ್ತಾ ಎಂದು ನೋಡಬೇಕಾಗಿದೆ. ಒಂದು ವೇಳೆ ಅಂದುಕೊಂಡಷ್ಟು ಕಲೆಕ್ಷನ್ ಮಾಡದಿದ್ದರೆ ವಿತರಕರು ನಷ್ಟ ಅನುಭವಿಸಬೇಕಾಗುತ್ತದೆ.
ಈಗಲೇ ಓದಿ: Vettaiyan Box Office: ವೆಟ್ಟೆಯ್ಯಾನ್ ಮೊದಲ ಎರಡು ವಾರಗಳಲ್ಲಿ ಕರ್ನಾಟಕದಲ್ಲಿ ಗಳಿಸಿದ ಹಣವೆಷ್ಟು??
ಚಿತ್ರ ತಂಡ ಎರಡು ಹಾಡುಗಳನ್ನು ಬಿಡುಗಡೆ ಮಾಡಿದೆ. ಆ ಎರಡು ಹಾಡುಗಳು ಬಹಳಷ್ಟು ಸದ್ದು ಮಾಡಿದವು. ಆದರೆ ಚಿತ್ರ ಟೀಸರ್ ಬಿಡುಗಡೆಯಾಗಿದ್ದರು ಅಷ್ಟಾಗಿ ಸದ್ದು ಮಾಡಲಿಲ್ಲ. ಸಿನಿಮಾ ಡಿಸೆಂಬರ್ 6ಕ್ಕೆ ಬಿಡುಗಡೆಯಾಗಲು ಸಿದ್ದವಾಗುತ್ತಿದೆ. ಟ್ರೈಲರ್ ನವೆಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗಳಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾ ಯಾವೆಲ್ಲ ದಾಖಲೆಗಳನ್ನು ಮುರಿಯುತ್ತದೆ ಎಂದು ಕಾದು ನೋಡಬೇಕಷ್ಟೇ??