Salaar: ಸಲಾರ್ ಸಿಕ್ವೇಲ್ ನ ಶೂಟಿಂಗ್ ಆರಂಭ! ಯಾವಾಗ ಬರಲಿದೆ ಸಲಾರ್ 2 ??

ಬಹು ನಿರೀಕ್ಷಿತ ಫ್ಯಾನ್ ಇಂಡಿಯಾ ಸಿನಿಮಾದಲ್ಲಿ ಸಲಾರ್ ಸಿಕ್ವೇಲ್ ಕೂಡ ಒಂದು. ರೆಬೆಲ್ ಸ್ಟಾರ್ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡ ಈ ಸಿನಿಮಾಕ್ಕೆ ನಮ್ಮ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡಿದ್ದಾರೆ. 

ಸಲಾರ್ ಭಾಗ 1 ಸುಮಾರು 250 ಕೋಟಿ ರೂಪಾಯಿಗಳಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಸಿನಿಮಾ ಸುಮಾರು 617 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಪ್ರೇಕ್ಷಕರು ಸಲಾರ್ ನ ಮುಂದುವರೆದ ಭಾಗಕ್ಕೆ ಕಾಯುತ್ತಿದ್ದರೆ. ಇದೀಗ ಪ್ರಭಾಸ್ ಅವರ ಹುಟ್ಟುಹಬ್ಬಕ್ಕೆ ಭರ್ಜರಿ ಅಪ್ಡೇಟ್ ಒಂದು ಸಿಕ್ಕಿದೆ. ಸಲಾರ್ ಭಾಗ 2ರ ಶೂಟಿಂಗ್ ಪ್ರಾರಂಭಗೊಂಡಿದ್ದು, ಇನ್ನೂ ಕೆಲವು ದಿನಗಳಲ್ಲಿ ಪ್ರಭಾಸ್ ಅವರು ಶೂಟಿಂಗ್ ಸೇರಿಕೊಳ್ಳಲಿದ್ದಾರೆ. ಈ ಶೆಡ್ಯೂಲ್ ನಲ್ಲಿ 20 ದಿನಗಳ ಚಿತ್ರೀಕರಣವಿದ್ದು, ಮೂಲಗಳ ಪ್ರಕಾರ ಆ 20 ದಿನಗಳ ಕಾಲ ಕೆಲ ಆಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗುವುದು ಎನ್ನಲಾಗಿದೆ.

ಇದರ‌ ಜೊತೆ ಪ್ರಭಾಸ್ ಅವರ ಮುಂದಿನ ಸಿನಿಮಾ ವಾದ 'ರಾಜ ಸಾಬ್' ನ ಮೋಷನ್ ಪಿಕ್ಚರ್ ಅನ್ನು ಕೂಡ ಬಿಡುಗಡೆ ಮಾಡಲಾಗಿದೆ. ಫ್ಯಾನ್ ಇಂಡಿಯಾ ಸ್ಟಾರ್ ಆದ ಪ್ರಭಾಸ್ ಅವರ ಎರಡು ಸಿನಿಮಾದ ಬಿಗ್ ಅಪ್ಡೇಟ್ ನಿಂದ ಅಭಿಮಾನಿಗಳು ಸಂತಸ ಕೊಂಡಿದ್ದಾರೆ. ಈಗಲೇ ಓದಿ: Actor Yash: ಕೆಜಿಎಫ್ 3 ಸ್ಪಷ್ಟನೆ ನೀಡಿದ ಯಶ್! ಯಾವಾಗ ಬರಲಿದೆ ಸಿನಿಮಾ??

ಈಗ ಸದ್ಯಕ್ಕೆ ಪ್ರಭಾಸ್ ಅವರ ಮರುತಿ ಅವರ ಹಾರರ್ ಕಾಮಿಡಿ ಚಿತ್ರ 'ರಾಜ ಸಾಬ್' ನಲ್ಲಿ ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ಸಂದೀಪ್ ರೆಡ್ಡಿ ವಾಂಗ ಅವರ ಸ್ಪಿರಿಟ್ ಸಿನಿಮಾಕ್ಕೂ ತಯಾರಾಗುತ್ತಿದ್ದಾರೆ. ಇದರ ಮದ್ಯೆ ಸಲಾರ್ ಸಿಕ್ವೆಲ್ ಯಾವಾಗ ಬರಲಿದೆ ಎಂದು ಕಾದು ನೋಡಬೇಕಿದೆ. ಒಂದು ಮಾಹಿತಿಯ ಪ್ರಕಾರ ಸಲಾರ್ ಭಾಗ 2 ಮುಂದಿನ ವರ್ಷ 2025ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. 

Previous Post Next Post