ಧ್ರುವ ಸರ್ಜಾ ಅವರ ಬಹು ನಿರೀಕ್ಷಿತ ಸಿನಿಮಾ ಮಾರ್ಟಿನ್ ಬಿಡುಗಡೆಯಾಗಿ ಎಲ್ಲೆಡೆ ಜನರ ಮನಸನ್ನು ಗೆಲ್ಲುತ್ತಿದೆ. ಮೂರು ವರ್ಷಗಳ ನಂತರ ಧ್ರುವ ಸರ್ಜಾ ಅವರ ಐದನೇ ಸಿನಿಮಾ ಮತ್ತು ಮೊದಲ ಫ್ಯಾನ್ ಇಂಡಿಯಾ ಸಿನಿಮಾ ಬಿಡುಗಡೆಯಾಗಿ, ಇಷ್ಟು ದಿನಗಳ ಕಾಲ ಕಾದು ಕುಳಿತ ಅಭಿಮಾನಿಗಳ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಸಿನಿಮಾದ ಕಲೆಕ್ಷನ್ ವಿಚಾರಕ್ಕೆ ಬಂದರೆ, ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ. ಕರ್ನಾಟಕ ಬಿಟ್ಟರೆ ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಹೆಚ್ಚಿನ ಕಲೆಕ್ಷನ್ ಮಾಡಿದೆ. ಚಿತ್ರ ತಂಡದ ಅಧಿಕೃತ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ಮೊದಲ ದಿನ ಒಟ್ಟು 9.1 ಕೋಟಿ ಮತ್ತು ಎರಡನೇ ದಿನ 13.4 ಕೋಟಿ ರೂಪಾಯಿಗಳನ್ನು ಗಳಿಸಿದೆ. ಇನ್ನು ಮೂರನೇ ದಿನದ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಈ ಮಾಹಿತಿಯನ್ನು ಸ್ವತಃ ಚಿತ್ರ ತಂಡವೇ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದೆ. ಮತ್ತು ಧ್ರುವ ಸರ್ಜಾ ಅವರನ್ನು ಬಾಕ್ಸ್ ಆಫೀಸ್ ನ ಹಲ್ಕ್ (Hulk)ಎಂದು ಕರೆಯಲಾಗಿದೆ. ಎಪಿ ಅರ್ಜುನ್ ನಿರ್ದೇಶನದ ಮತ್ತು ಉದಯ್ ಮೆಹ್ತಾ ಅವರ ನಿರ್ಮಾಣದ ಈ ಚಿತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ಎಷ್ಟು ಬಂದಿವೆಯೋ ಅಷ್ಟೇ ನಕಾರಾತ್ಮಕ ಪ್ರತಿಕ್ರಿಯೆ ಬಂದಿವೆ.
ಫ್ಯಾನ್ ಇಂಡಿಯಾ ಸಿನಿಮಾವಾದ್ದರಿಂದ ನಿರೀಕ್ಷೆಗಳು ಹೆಚ್ಚಾಗಿರುತ್ತೆ. ಮಾರ್ಟಿನ್ ಹಿಂದಿ ಮತ್ತು ತೆಲುಗುನಲ್ಲಿ ಸ್ವಲ್ಪ ಮಟ್ಟಿಗೆ ಕಲೆಕ್ಷನ್ ಮಾಡಿದೆ. ಆದರೆ ಮಲಯಾಳಂ ಮತ್ತು ತಮಿಳುನಲ್ಲಿ ಅಷ್ಟಾಗಿ ಜನರು ಸ್ವೀಕರಿಸಲಲ್ಲಿ. ಕರ್ನಾಟಕದಲ್ಲಿ ಮಾತ್ರ ಜನರು ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಾಗಾಗಿ ಕೇವಲ ಎರಡೇ ದಿನದಲ್ಲಿ 22 ಕೋಟಿ ರೂಪಾಯಿಗಳನ್ನು ಗಳಿಸಿದೆ. ಮೂರನೇ ದಿನದ ಕಲೆಕ್ಷನ್ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಲಭಿಸಿಲ್ಲ. ಚಿತ್ರ ತಂಡ ಮುಂದಿನ ದಿನಗಳಲ್ಲಿ ಬಹುಶಃ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳಬಹುದು.