ಸಿನಿ ಪ್ರಿಯರ ಮನ ಗೆದ್ದ ಈ ವರ್ಷದ ಸಿನಿಮಾಗಳಲ್ಲಿ ಇಬ್ಬನಿ ತಬ್ಬಿದ ಇಳೆಯಲಿ ಕೂಡ ಒಂದು. ಚಂದನವನದ ಹಿಟ್ ಸರಣಿಗೆ ಸೇರಿದೆ. ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನ ರಕ್ಷಿತ್ ಶೆಟ್ಟಿ ತಮ್ಮ ಹೋಂ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ ಈ ಸಿನಿಮಾ ಕನ್ನಡ ಜನತೆಯ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಸೆಪ್ಟೆಂಬರ್ 5 ರಂದು ಬಿಡುಗಡೆಯಾದ ಈ ಸಿನಿಮಾ ಒಂದು ತಿಂಗಳಾದರೂ ಇನ್ನೂ ಓಟಿಟಿ ಅಂಗಳಕ್ಕೆ ಬರಲಿಲ್ಲ. ಯಾವಾಗ, ಯಾವ ಓಟಿಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗುತ್ತೇ ಎಂದು ಸಿನಿ ಪ್ರಿಯರು ಕಾಯುತ್ತಿದ್ದರೆ. ಒಂದು ಮಾಹಿತಿಯ ಪ್ರಕಾರ ಪ್ರೈಮ್ ವಿಡಿಯೋ ಈ ಸಿನಿಮಾದ ಓಟಿಟಿ ಹಕ್ಕುನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾವಾಗ ಓಟಿಟಿ ಫ್ಲ್ಯಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿಲ್ಲ.
ಅಂಕಿತಾ ಅಮರ್, ವಿಹಾನ್ ಗೌಡ, ಮಯುರಿ ನಟರಾಜ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಚಂದ್ರಜಿತ್ ಅವರು ತಮ್ಮ ಬರವಣಿಗೆಯ ಮೂಲಕ ಯುವಕರನ್ನು ಚಿತ್ರ ಮಂದಿರಕ್ಕೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಂಕಿತಾ ಅಮರ್ ಮತ್ತು ವಿಹಾನ್ ಗೌಡ ಅವರ ನಟನೆ ಕೂಡ ಈ ಸಿನಿಮಾದ ಯಶಸ್ಸಿಗೆ ಕಾರಣ ಎಂದು ನಿರ್ಮಾಪಕ ರಕ್ಷಿತ್ ಶೆಟ್ಟಿ ಈ ಹಿಂದೆ ಹಂಚಿಕೊಂಡಿದ್ದರು. ಸುಮಾರು ಒಂದು ತಿಂಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದ್ದು ಮತ್ತು ಈ ವರ್ಷದ ರೊಮ್ಯಾಂಟಿಕ್ ಹಿಟ್ ಸಿನಿಮಾವಾಗಿ ಹೊರ ಹೊಮ್ಮಿದೆ.