ಬಿಗ್ ಬಾಸ್ ಕನ್ನಡದ ನಂಬರ್ 1 ರಿಯಾಲಿಟಿ ಶೋ. ಅತೀ ಹೆಚ್ಚು ವೀಕ್ಷಕರನ್ನು ಹೊಂದಿರುವ ರಿಯಾಲಿಟಿ ಶೋ. ಪ್ರಾರಂಭವಾದ ಎರಡೇ ವಾರದಲ್ಲಿ 9.2 ಟಿವಿಆರ್(Telivision Rating) ಪಡೆದಿದೆ. ಒಟ್ಟು 17 ಸ್ಪರ್ಧಿಗಳು ದೊಡ್ಡ ಮನೆ ಪ್ರವೇಶಿಸಿದರು. ಮೊದಲ ವಾರದಲ್ಲಿ ಯಮುನಾ ಅವರು ಮನೆಯಿಂದ ಹೊರಗೆ ಬಂದರು.
ಬಿಗ್ ಬಾಸ್ ಸೀಸನ್ 11 ಸ್ವರ್ಗ ಮತ್ತು ನರಕ ಎಂಬ ಹೊಸ ಪರಿಕಲ್ಪನೆಯನ್ನು ಹೊಂದಿದ್ದು, ಈಗ ಸ್ವರ್ಗದಲ್ಲಿ ಒಟ್ಟು 9 ಸ್ಪರ್ಧಿಗಳಿದ್ದಾರೆ ಮತ್ತು ನರಕದಲ್ಲಿ 7 ಸ್ಪರ್ದಿಗಳಿದ್ದಾರೆ. ಒಟ್ಟು ಮನೆಯಲ್ಲಿ ಈಗ 16 ಸ್ಪರ್ಧಿಗಳ ಇದ್ದಾರೆ. ಕಳೆದ ವಾರ ಲಾಯರ್ ಜಗದೀಶ್ ಅವರು ಮನೆಯ ಎಲ್ಲಾ ಸ್ಪರ್ಧಿಗಳೊಡನೆ ಜಗಳ ಮಾತು ಕತೆ ಮಾಡಿ ಜನರ ಗಮನ ಸೆಳೆದಿದ್ದರು. ಆದರೆ ಈ ವಾರ ಸ್ವಲ್ಪ ತಣ್ಣಗಾಗಿದ್ದಾರೆ.
ಇದೀಗ ಎರಡನೇ ವಾರದ ಪಂಚಾಯಿತಿಗೆ ತಲುಪಿದೆ. ಅಷ್ಟರಲ್ಲಿ ದೊಡ್ಡ ಮನೆಯಲ್ಲಿ ಎಮರ್ಜೆನ್ಸಿ ಅಲರ್ಟ್ ಸದ್ದು ಮಾಡಿದೆ. ಮನೆಯಲ್ಲಿ ಎಲ್ಲರು ಅವರವರ ಕೆಲಸ ಮಾಡುತ್ತಿದ್ದಗಾ ಬಿಗ್ ಬಾಸ್ ನ ಎಮರ್ಜೆನ್ಸಿ ಲೈಟ್, ಸೈರನ್ ಸದ್ದು ಮಾಡಿದೆ. ಮನೆಯಲ್ಲಿ ಈ ಸುದ್ದ ಕೇಳುತ್ತಿದ್ದಂತೆ ಎಲ್ಲರು ಬೆಚ್ಚಿ ಬಿದ್ದಿದ್ದಾರೆ.
ಮನೆಗೆ ಕ್ರೈನ್ ಮೂಲಕ ಇಳಿದ ಕೆಲವು ಅಪರಿಚಿತ ವ್ಯಕ್ತಿಗಳು ನರಕದಲ್ಲಿದ್ದ ಎಲ್ಲಾ ವಸ್ತುಗಳನ್ನು ಪುಡಿ ಮಾಡಿ, ಚಾಪೆ, ದಿಂಬು ಹಾಸಿಗೆ ಯನ್ನು ಹೊರಗೆ ಹಾಕಿದ್ದಾರೆ. ನರಕದ ಕಂಬಿಗಳನ್ನು ಯಂತ್ರದ ಸಹಾಯದಿಂದ ಮುರಿದಿದ್ದಾರೆ. ಕೊನೆಗೆ ನರಕ ಮತ್ತು ಸ್ವರ್ಗಕ್ಕಿದ್ದ ಕಬ್ಬಿಣದ ಅಡ್ಡ ಗೋಡೆಯನ್ನು ಕ್ರೈನ್ ಮೂಲಕ ಹೊರಗೆ ತೆಗೆದಿದ್ದಾರೆ. ಇದನ್ನು ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ನ ಇವತ್ತಿನ (ಅಕ್ಟೋಬರ್ 11) ಪ್ರೊಮೋದಲ್ಲಿ ಬಿಡುಗಡೆ ಮಾಡಿದೆ. ಇದರ ಹಿಂದಿನ ಕಾರಣವನ್ನು ಇವತ್ತಿನ ಎಪಿಸೋಡಿನಲ್ಲಿ ನೋಡಬೇಕಷ್ಟೇ