ಚಂದನವನದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್ ಇಂದು (ಅಕ್ಟೋಬರ್ 11) ಭಾರತದದ್ಯಾಂತ ಬಿಡುಗಡೆಯಾಗಲಿದೆ. ಕನ್ನಡ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಸುಮಾರು 3000 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ. ಎಪಿ ಅರ್ಜುನ್ ನಿರ್ದೇಶನದ ಉದಯ ಕೆ ಮೆಹ್ತಾ ಅವರ ನಿರ್ಮಾಣದ ಧ್ರುವ ಸರ್ಜಾ ಮತ್ತು ವೈಭವಿ ಶಾಂಡಿಲ್ಯ ನಟಿಸಿದ್ದಾರೆ.
ಕನ್ನಡದ ಬಿಗ್ ಬಜೆಟ್ ಸಿನಿಮಾಗಳಲ್ಲಿ ಮಾರ್ಟಿನ್ ಕೂಡ ಒಂದು. ಸುಮಾರು 100 ಕೋಟಿ ಹೆಚ್ಚಿನ ಬಂಡವಾಳವನ್ನು ಈ ಸಿನಿಮಾಕ್ಕೆ ಉದಯ್ ಮೆಹ್ತಾ ಅವರು ಹೂಡಿದ್ದಾರೆ. ಇದು ನಿರ್ಮಾಪಕರಿಗೆ ನಟ ಮತ್ತು ನಿರ್ದೇಶಕರ ಮೇಲೆ ಇರುವ ನಂಬಿಕೆಯನ್ನು ಸಾರುತ್ತದೆ ಮತ್ತು ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಸುಮಾರು ಮೂರು ವರ್ಷಗಳ ಕಾಲ ಈ ಸಿನಿಮಾಕ್ಕಾಗಿ ಚಿತ್ರತಂಡ ಕೆಲಸ ಮಾಡದೆ. ಈ ಚಿತ್ರ ಸುಮಾರು 250 ದಿನಗಳ ಚಿತ್ರೀಕರಣವನ್ನು ತೆಗೆದುಕೊಂಡಿದೆ. ಧ್ರುವ ಸರ್ಜಾ ಅವರ ಅದ್ದೂರಿ, ಭರ್ಜರಿ, ಬಹದ್ದೂರ್ ಮತ್ತು ಪೊಗರಿನ ನಂತರ ಅವರ ಐದನೇ ಸಿನಿಮಾ ಈ ಮಾರ್ಟಿನ್ ಆಗಿದೆ. ಇವರ ಮೊದಲಿನ ನಾಲ್ಕು ಸಿನಿಮಾ ಹೋಲಿಸಿದರೆ ಮಾರ್ಟಿನ್ ಒಂದು ವಿಭಿನ್ನ ಚಿತ್ರವಾಗಿದೆ. ಸಂಪೂರ್ಣವಾಗಿ ಆಕ್ಷನ್ ನಿಂದ ಕೂಡಿದ ಸಿನಿಮವಾಗಿದೆ.
ಕೇವಲ ನಾಲ್ಕು ಸಿನಿಮಾ ಮೂಲಕ ಕರ್ನಾಟಕದ ಜನರ ಮನಸ್ಸನ್ನು ಗೆದ್ದ ಧ್ರುವ ಸರ್ಜಾ ಅವರು ಈ ಸಿನಿಮಾದ ಮೂಲಕ ಇಡೀ ಭಾರತದ ಸಿನಿ ಪ್ರಿಯರ ಮನಸ್ಸನ್ನು ಗೆಲ್ಲಲು ಹೊರಟಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ಅದ್ದೂರಿ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಧ್ರುವ ಸರ್ಜಾ ಮೊದಲ ಸಿನಿಮಾದಲ್ಲಿ ಯಶಸ್ಸನ್ನು ಕಾಣುತ್ತಾರೆ. ಚಿಕ್ಕಪ್ಪ ಆಕ್ಷನ್ ಕಿಂಗ್ ಆಗಿದ್ದಾರಿಂದ ಇವರು ಆಕ್ಷನ್ ಪ್ರಿನ್ಸ್ ಅನ್ನುವ ಬಿರುದನ್ನು ಹೊಂದುತ್ತಾರೆ. ಮಾರ್ಟಿನ್ ಧ್ರುವ ಸರ್ಜಾ ಅವರ ಮೊದಲ ಫ್ಯಾನ್ ಇಂಡಿಯಾ ಸಿನಿಮವಾಗಿದೆ.
ಮಾರ್ಟಿನ್ ಗೆ ಧ್ರುವ ಸರ್ಜಾ ಅವರ ಚಿಕ್ಕಪ್ಪನಾದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಕಥೆಯನ್ನು ಬರೆದಿದ್ದು, ಸಿನಿಮಾಕ್ಕೆ ಮನಿ ಶರ್ಮಾ ಅವರು ಸಂಗೀತ ನೀಡಿದ್ದಾರೆ. ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ರವಿ ಬಸ್ರೂರು ಅವರ ಪ್ರಕಾರ ಅವರು ಇಲ್ಲಿಯವರೆಗೆ ಬೇರೆ ಯಾವುದೆ ಸಿನಿಮಕ್ಕೂ ಈ ರೀತಿಯ ಸಂಗೀತವನ್ನು ನೀಡಿಲ್ಲವಂತೆ. ಧ್ರುವ ಸರ್ಜಾ ಅವರಿಗೆ ಹೋಲಿಕೆ ಆಗುವ ಸಂಗೀತವನ್ನು ನೀಡಿದ್ದೇನೆ ಎಂದು ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.
ಇಂದಿನಿಂದ ಭಾರತದಾದ್ಯಂತ ಸಿನಿಮಾ ಬಿಡುಗಡೆಯಾಗಲಿದ್ದು ಧ್ರುವ ಸರ್ಜಾ ಅವರ ಅಭಿಮಾನಿಗಳು ಎಲ್ಲೆಡೆ ಈ ಸಂಭ್ರಮವನ್ನು ಆಚರಿಸುತ್ತಿದ್ದಾರೆ.