ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ನವಗ್ರಹ ಮರು ಬಿಡುಗಡೆ

ತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ನಲ್ಲಿ ಮರು ಬಿಡುಗಡೆ ಬಹಳಷ್ಟು ಟ್ರೆಂಡ್ ಆಗುತ್ತಿದೆ. ಜಾಕಿ, ಶಾಸ್ತ್ರಿ, ಕರಿಯ, ಉಪೇಂದ್ರ ಈ ಸಿನಿಮಾಗಳು ಮರು ಬಿಡುಗಡೆಯಾಗಿ ಬಹಳಷ್ಟು ದಿನಗಳ ಕಾಲ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ದರ್ಶನ್ ಅವರ ಶಾಸ್ತ್ರಿ ಮತ್ತು ಉಪೇಂದ್ರ ಅವರ ನಿರ್ದೇಶನ ಮತ್ತು ಅಭಿನಯದ ಉಪೇಂದ್ರ ಸಿನೆಮಾ ಬಹಳಷ್ಟು ದಿನಗಳ ಕಾಲ ಪ್ರದರ್ಶನ ಕಂಡಿದೆ.


ದರ್ಶನ್ ಅಭಿನಯದ ದಿನಕರ್ ತೂಗುದೀಪ್ ನಿರ್ದೇಶನದ ನವಗ್ರಹ ಈಗ ಮರು ಬಿಡುಗಡೆಗೆ ಸಿದ್ಧವಾಗಿದೆ. ನವಗ್ರಹ ದರ್ಶನ್ ಅವರ ಯಶಸ್ಸಿನ ಸಿನಿಮಾಗಳಲ್ಲಿ ಒಂದಾಗಿದೆ.  ಈ ಸಿನಿಮಾದ 9 ಮುಖ್ಯ ಪಾತ್ರಗಳನ್ನು ನಿರ್ವಹಿಸಿದವರು ಖಲನಾಯಕರ ಮಕ್ಕಳು. 

ದರ್ಶನ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರೂ ಇವರ ಈ ಸಿನಿಮಾದಲ್ಲಿ ಖಲನಾಯಕರಾಗಿ ಅಭಿನಯಿಸಿದ್ದಾರೆ. ಇವರೊಡನೆ ತರುಣ್ ಸುಧೀರ್, ವಿನೋದ್ ಪ್ರಭಾಕರ್, ಸೃಜನ್ ಲೋಕೇಶ್ ಕಾಣಿಸಿಕೊಂಡಿದ್ದಾರೆ. 

ನವಗ್ರಹ ಸಿನಿಮಾದ ಕಥೆ: 
ಈ ಸಿನಿಮಾ ಮೈಸೂರು ಅರಮನೆಯ ಅಂಬಾರಿಯನ್ನು ಕಳ್ಳತನ ಮಾಡುವ‌ ಬಗ್ಗೆ ಇದೆ. ದರ್ಶನ್ ಅವರು ಜಗ್ಗು ಎಂಬ ಪಾತ್ರವನ್ನು ಮಾಡಿದ್ದಾರೆ. ಜಗ್ಗು ಮತ್ತು ಅವನ ಎಂಟು ಮಂದಿ ಸ್ನೇಹಿತರು ಸೇರಿ ಅಂಬಾರಿಯನ್ನು ಅಪಹರಿಸಲು ರಹಸ್ಯ ದಾರಿಯ ಮೂಲಕ ಅರಮನೆಗೆ ಹೋಗುತ್ತಾರೆ. ಅವರು ಮಾಡಿದ್ದ ನಕಲಿ ಅಂಬಾರಿಯನ್ನು ಅಲ್ಲಿಟ್ಟು ಅಲ್ಲಿದ್ದ ಅಂಬಾರಿಯನ್ನು ಅಪಹರಣ ಮಾಡುತ್ತಾರೆ. ಅಲ್ಲಿಂದ ಬಸ್ಸಿನ ಮೂಲಕ ತಾವು ತಲುಪಿಸಾಬೇಕಾದ ಸ್ಥಳಕ್ಕೆ ಹೋಗುತ್ತಾರೆ. ‌ಇದನ್ನು ತಿಳಿದ ಮೈಸೂರಿನ ಪೋಲೀಸ್ ಅಧಿಕಾರಿ ಇವರನ್ನು ತಡೆಯಲು ಪ್ರಯತ್ನಿಸುತ್ತಾನೆ ಮತ್ತು ಅದರಲ್ಲಿ ಯಶಸ್ವಿಯಾಗುತ್ತಾನೆ. ಈ ಕಥೆಯನ್ನು ದಿನಕರ್ ತೂಗುದೀಪ ಅವರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ತೋರಿಸಿದ್ದಾರೆ. 

ಸಿನಿಮಾ ಆದಷ್ಟು ಬೇಗ ಮರು ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ದಿನಕರ್ ತೂಗುದೀಪ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. 
Previous Post Next Post