ಶ್ರೀಮುರುಳಿ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ಬಘೀರ ಅಕ್ಟೋಬರ್ 31 ದೀಪಾವಳಿಗೆ ಬಿಡುಗಡೆಯಾಗಲು ಸಿದ್ದವಾಗುತ್ತಿದೆ. ಪ್ರಶಾಂತ ನೀಲ್ ಅವರು ಬರೆದಿದ್ದು ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಅವರು ಬಂಡವಾಳ ಹೂಡಿದ್ದಾರೆ. ಡಾ.ಸೂರಿ ನಿರ್ದೇಶನದ ಮಾಡಿದ್ದು ರುಕ್ಮಿಣಿ ವಸಂತ್ ಅವರು ಶ್ರೀಮುರುಳಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
'ರುಧೀರ ಹಾರಾ' ಎಂಬ ಮೊದಲ ಹಾಡನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಪ್ರಚಾರವನ್ನು ಪ್ರಾರಂಭಿಸಿದ್ದಾರೆ. ಹಾಡಿಗೆ ಅಜನೀಶ್ ಲೋಕನಾಥ್ ಅವರು ಸಂಗೀತ ಸಂಯೋಜನೆ ಮಾಡಿದ್ದು ಅನಿರುದ್ಧ್ ಶಾಸ್ತ್ರಿ ಅವರು ಹಾಡಿ ಸಾಹಿತ್ಯ ಬರೆದಿದ್ದಾರೆ. ಹಾಡು ತೆಲುಗಿನಲ್ಲಿ 'ರುಧಿರ ಧಾರಾ' ಎಂಬ ಶೀರ್ಷಿಕೆಯಿಂದ ಬಿಡುಗಡೆಯಾಗಿದೆ. ಸತ್ಯ, ಗೌರವ ಸತ್ಯ ಮೇವ ಜಯತೆ ಎಂಬ ಸಾಲನ್ನು ಹೊಂದಿದ್ದು, ಸಿನಿಮಾದಲ್ಲಿ ಶ್ರೀಮುರುಳಿ ಅವರು ಸತ್ಯ, ನ್ಯಾಯದ ಪರ ಹೋರಾಟಗಾರ ಮಾಡುತ್ತಿರಬಹುದು.
ಅಜನೀಶ್ ಅವರು ರವಿ ಬಸ್ರೂರು ಅವರ ಶೈಲಿಯಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಆದರೆ ಇದು ಇವರಿಗೆ ಹೊಸದೇನಲ್ಲ. ಕಾತಂರ, ವಿಕ್ರಾಂತ ರೋಣ, ಮಂಗಳವಾರಂ ಮತ್ತು ತಮಿಳಿನ ಈ ವರ್ಷದ ಹಿಟ್ ಸಿನಿಮಾ ಮಹಾರಾಜಕ್ಕೂ ಇವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಜನೀಶ್ ಅವರು ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲೂ ಬಹು ಬೇಡಿಕೆಯ ಸಂಗೀತ ನಿರ್ದೇಶಕ.
ಈ ಹಿಂದೆ ಬಘೀರ ಫ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳಲಾಗುತ್ತಿತ್ತು. ಆದರೆ ಕೆಲವು ಭಾಷೆಗಳಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ಹಾಡು ಕೇವಲ ಕನ್ನಡ ಮತ್ತು ತೆಲುಗಿನಲ್ಲಿ ಮಾತ್ರ ಬಿಡುಗಡೆಯಾಗಿದೆ. ಹಾಗಾಗಿ ಸಿನಿಮಾ ಬಹುಶಃ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಹೊಂಬಾಳೆ ಫಿಲ್ಮ್ಸ್ ಮತ್ತು ಪ್ರಶಾಂತ್ ನೀಲ್ ಅವರಿಗೆ ತೆಲುಗಿನಲ್ಲಿ ಅತಿ ಹೆಚ್ಚಿನ ಜನಪ್ರಿಯತೆ ಇರುವುದರಿಂದ ತೆಲುಗಿನಲ್ಲಿ ಮಾತ್ರ ಬಿಡುಗಡೆ ಮಾಡುತ್ತಿದ್ದಾರೆ.
ಸಿನಿಮಾಕ್ಕೆ ಪ್ರಶಾಂತ್ ನೀಲ್ ಅವರು ಕತೆ ಬರೆದಿದ್ದು, ನೀಲ್ ಅವರ ಉಗ್ರಂ, ಕೆಜಿಎಫ್, ಸಾಲಾರ್ ಗೆ ಹೋಲಿಸಿದರೆ ಇದು ವಿಭಿನ್ನ ಕತೆಯಾಗಿದೆ. ಹಾಗಾಗಿ ಈ ಸಿನಿಮಾದ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ಸಿನಿಮಾಕ್ಕೆ ಡಾ. ಸೂರಿ ಅವರ ನಿರ್ದೇಶನ ಮಾಡಿದ್ದು, ಇವರು ಈ ಹಿಂದೆ ನೀಲ್ ಅವರು ಜೊತೆ ಸಲಾರ್ ನ ಬರವಣಿಗೆಗೆ ಕೈ ಜೋಡಿಸಿದ್ದಾರೆ.